LATEST NEWS
ಉಡುಪಿ ಮೂಲದ ಖಡಕ್ ಐಪಿಎಸ್ ಆಫೀಸರ್ ಮಧುಕರ್ ಶೆಟ್ಟಿ ನಿಧನ
ಉಡುಪಿ ಮೂಲದ ಖಡಕ್ ಐಪಿಎಸ್ ಆಫೀಸರ್ ಮಧುಕರ್ ಶೆಟ್ಟಿ ನಿಧನ
ಬೆಂಗಳೂರು ಡಿಸೆಂಬರ್ 29: ರಾಜ್ಯದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ. ಎಚ್1 ಎನ್1 ಸೋಂಕಿನಿಂದ ಬಳಲುತ್ತಿರುವ ಮಧುಕರ್ ಶೆಟ್ಟಿ ಅವರಿಗೆ ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಹಿರಿಯ ಪತ್ರಕರ್ತ ಹಾಗೂ ಮುಂಗಾರು ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ ವಡ್ಡರ್ಸೆ ರಘುರಾಮಶೆಟ್ಟಿ ಅವರ ಪುತ್ರರಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು. 1999ರ ಬ್ಯಾಚ್(ಕರ್ನಾಟಕ ಕೇಡರ್)ನಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದವರು.
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)ದ ಪರೀಕ್ಷೆ ಕೈಗೊಳ್ಳುವ ಮುನ್ನ ಹೊಸದಿಲ್ಲಿಯ ಜವಾಹರ್ಲಾಲ್ ವಿಶ್ವವಿದ್ಯಾಲಯ(ಜೆಎನ್ಯು)ದಲ್ಲಿ ಸಮಾಜ ಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಅಲ್ಲದೆ, ನ್ಯೂಯಾರ್ಕ್ನ ಅಲ್ಬಾನಿಯಲ್ಲಿರುವ ರಾಕ್ಫೆಲ್ಲರ್ ಕಾಲೇಜ್ ಆಫ್ ಪಬ್ಲಿಕ್ ಅಫೇರ್ಸ್ ಅಂಡ್ ಪಾಲಿಸಿ ವಿಶ್ವವಿದ್ಯಾಲಯ ದಿಂದ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪಿಎಚ್ಡಿ ಪದವಿಯನ್ನು ಪಡೆದಿದ್ದಾರೆ.
ಹೆಚ್1ಎನ್1 ಸೋಂಕು ತಗುಲಿ, ಶ್ವಾಸಕೋಶ ಹಾಗೂ ಜೀರ್ಣಾಂಗ ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸಿದ್ದ ಮಧುಕರ್ ಶೆಟ್ಟಿ ಅವರು ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Facebook Comments
You may like
ಬುಲೆಟ್ ಗೆ ಡಿಕ್ಕಿ ಹೊಡೆದ ಕಾರು: ಬುಲೆಟ್ ಸವಾರರಿಬ್ಬರು ಸಾವು
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
4ನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ದ ರೋಚಕ ಗೆಲವು – ಸರಣಿ ಗೆದ್ದ ಭಾರತ
ಗೃಹಪ್ರವೇಶಗೊಳ್ಳಲಿದ್ದ ತನ್ನ ಕನಸಿನ ಮನೆಯಲ್ಲೆ ವಿದ್ಯುತ್ ಶಾಕ್ ಗೆ ಮನೆ ಯಜಮಾನ ಮೃತ್ಯು
ಜನವರಿ 16 ರಿಂದ ಕೊರೊನಾ ಲಸಿಕೆ ವಿತರಣೆ ಆರಂಭ
ಪಾಕ್ ಮಹಿಳೆ ಭಾರತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ!
You must be logged in to post a comment Login