ಸುವರ್ಣ ನ್ಯೂಸ್ ಸಂಪಾದಕನಿಗೆ ಜೀವ ಬೆದರಿಕೆ ಹಾಕಿದ ಮಂಗಳೂರು ಮುಸ್ಲೀಂ ಪೇಜ್

ಮಂಗಳೂರು ಡಿಸೆಂಬರ್ 28 : ರಾಜ್ಯದ ಖಾಸಗಿ ಸುದ್ದಿ ವಾಹಿನಿ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಅವರಿಗೆ ಜೀವ ಬೆದರಿಕೆಯ ಸಂದೇಶ ಬಂದಿದೆ. ಮಂಗಳೂರು ಮುಸ್ಲೀಂ ಪೇಜ್ ಫೆಸ್ ಬುಕ್‌ನಲ್ಲಿ ಈ ಜೀವ ಬೆದರಿಕೆ ಹಾಕಿದೆ.

ಖಾಸಗಿ ಚಾನಲ್‌ನಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆ ಎಂದು ಮುಸ್ಲೀಂ ಪೇಜ್ ಆರೋಪಿಸಿದ್ದು ಅಜಿತ್ ಅವರಿಗೆ ಮಂಗಳೂರು ಮುಸ್ಲೀಂ ಪೇಜ್ ಬೆದರಿಕೆ ಹಾಕಿದೆ.

ನಿನಗೆ ವಾರ್ನಿಂಗ್ ಇನ್ನು ಎರಡು ದಿನಗಳಲ್ಲಿ ನೀನು ಸಾರ್ವಜನಿಕವಾಗಿ ಲೈವ್ ಬಂದು ಕ್ಷಮೆ ಕೇಳದಿದ್ದರೆ ನಿನ್ನ ಹೆಂಡತಿ ಸದ್ಯದಲ್ಲೇ ಮುಂಡೆ ಆಗುವ ಕಾಲ ದೂರವಿಲ್ಲ ಎಂದು ಈ ಮೂಲಕ ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಬರೆಯಲಾಗಿದೆ.

ಇಸ್ಲಾಮಿನ ಅಂತ್ಯ ಪ್ರವಾದಿ ಮುಹಮ್ಮದ್ ಸ.ಅ ಅವರ ಬಗ್ಗೆ ಕೆಟ್ಟದಾಗಿ ನಿಂದನೆ ಮಾಡಿದ ನೀನು ಕ್ಷಮೆ ಕೇಳದೆ ಇದ್ದರೆ ನಿನ್ನ ಅಹಂಕಾರಕ್ಕೆ ನಿನ್ನ ಹೆಂಡತಿ ಸದ್ಯದಲ್ಲೇ ಮುಂಡೆಯಾಗುತ್ತಾಳೆ ನಿನ್ನ ಮಗು ಇನ್ನೊಬ್ಬನಿಗೆ ಅಪ್ಪ ಅನ್ನುದು ನಿರ್ಧರಿತ ಆಗಿದೆ. ಇನ್ನೆರಡು ದಿನಗಳಲ್ಲಿ ನೀನು ಸಾರ್ವಜನಿಕವಾಗಿ ಬಂದು ಕ್ಷಮೆ ಕೇಳಬೇಕು.

ಇಲ್ಲದೆ ಇದ್ದರೆ ನಿನ್ನ ಸಂಸಾರ ಬೀದಿ ಪಾಲಾಗುವುದರಲ್ಲಿ ಯಾವುದೇ ಸಂಶಯ ಬೇಡ ಇದು ಎಚ್ಚರಿಸುವುದು ಮಂಗಳೂರು ಮುಸ್ಲಿಮರು. ಮಂಗಳೂರು ಮುಸ್ಲಿಂ ಪೇಜ್ ಇದಕ್ಕೂ ಮೊದಲು ಯಾರಿಗೆಲ್ಲ ಈ ರೀತಿ ಎಚ್ಚರಿಕೆ ಕೊಟ್ಟಿದೆಯೋ ಅವರೆಲ್ಲಾ ಸಮಾಧಿಯಾಗಿದ್ದಾರೆ ನಿನಗೂ ಕಾಲ ದೂರವಿಲ್ಲ ನಿನ್ನ ಕೌಂಟ್ ಡೌನ್ ಶುರುವಾಗಿದೆ. ಬೀದಿ ಹೆಣವಾಗುವೆಯಾ ಕ್ಷಮೆ ಕೇಳುವೆಯಾ ನೀನೇ ನಿರ್ಧರಿಸು. ಎಂದು ಎಚ್ಚರಿಕೆಯ ಸಂದೇಶವನ್ನು ಪ್ರಕಟಿಸಲಾಗಿದೆ.

ಈ ಬಗ್ಗೆ ಈಗಾಗಲೇ ಪೊಲಿಸ್, ರಾಜ್ಯದ ಮುಖ್ಯಮಂತ್ರಿ ಗೃಹ ಇಲಾಖೆಗೆ ದೂರು ದಾಖಲಿಸಲಾಗಿದೆ. ಮಂಗಳೂರು ಮುಸ್ಲೀಂ ಪೇಜ್ ಈಗಾಗಲೇ ಹಿರಿಯ ಬಿಜೆಪಿ ನಾಯಕ ದಿವಂಗತ ಅನಂತ್ ಕುಮಾರ್ ಅವರ ನಿಧನ ಸಂದರ್ಭ ಇದೇ ರೀತಿಯ ಅವಹೇಳನಕಾರಿ ಬರಹಗಳನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿತ್ತು.

ಈ ಕುರಿತಂತೆ ಮಂಗಳೂರು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು. ಆದರೂ ತನ್ನ ಚಾಳಿಯನ್ನು ಬಿಡದ ಈ ಫೇಜ್ ಈಗ ಮತ್ತೆ ರಾಜ್ಯದ ಖಾಸಗಿ ಸುದ್ದಿ ವಾಹಿನಿಯ ಸಂಪಾದಕ ಅಜಿತ್ ಹನಮಕ್ಕನರ್ ಅವರಿಗೆ ಜೀವ ಬೇದರಿಕೆ ಹಾಕಿದೆ.

Facebook Comments

comments