Connect with us

LATEST NEWS

ಖ್ಯಾತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯ ಸಂಸ್ಕಾರಕ್ಕೆ ಹುಟ್ಟೂರಿನಲ್ಲಿ ಸಿದ್ದತೆ

ಖ್ಯಾತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯ ಸಂಸ್ಕಾರಕ್ಕೆ ಹುಟ್ಟೂರಿನಲ್ಲಿ ಸಿದ್ದತೆ

ಉಡುಪಿ ಡಿಸೆಂಬರ್ 29: ಖ್ಯಾತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯಸಂಸ್ಕಾರ ಅವರ ಹುಟ್ಟೂರಿನಲ್ಲಿ ನಡೆಯಲಿದೆ, ಈ ಹಿನ್ನಲೆಯಲ್ಲಿ ಮಧುಕರ್ ಶೆಟ್ಟಿ ಅವರ ತಾಯಿ ಮನೆ ಯಡಾಡಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಹುಟ್ಟೂರಿನಲ್ಲಿ ಸಿದ್ಧತೆ ನಡೆಯುತ್ತಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಉನ್ನತಾಧಿಕಾರಿಗಳು ತಂಡ ಸಿದ್ಧತೆಯಲ್ಲಿ ಭಾಗಿಯಾಗಿದ್ದು, ತಂದೆ ತಾಯಿ ಸಮಾಧಿ ಪಕ್ಕದಲ್ಲೆ ಅಂತ್ಯಕ್ರಿಯೆ ನಡೆಸಲು ಅನುವು ಮಾಡಲಾಗುತ್ತಿದೆ.

ಕುಂದಾಪುರ ತಹಶಿಲ್ಧಾರ್ ತಿಪ್ಪೆಸ್ವಾಮಿ ಹಾಗೂ ಹಿರಿಯ ಅಧಿಕಾರಿಗಳು ಸಮ್ಮುಖದಲ್ಲಿ ದೂರದ ಸಂಬಂಧಿಗಳು ಸಿದ್ದತೆ ಯಲ್ಲಿ ತೊಡಗಿಕೊಂಡಿದ್ದಾರೆ.

ರಾತ್ರಿ ಹನ್ನೆರಡು ಗಂಟೆ ವೇಳೆಗೆ ಮಧುಕರ್ ಶೆಟ್ಟಿ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಅಗಮಿಸಲಿದೆ. ನಾಳೆ ಮುಂಜಾನೆ ಎಂಟು ಗಂಟೆಯ ನಂತ್ರ ಯಡಾಡಿ ಮನೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಹತ್ತು ಗಂಟೆಯ ವೇಳೆ ಅಂತಿಮ ಸಂಸ್ಕಾರ ಹಿಂದೂ ಸಂಪ್ರದಾಯ ದಂತೆ ವಿಧಿವತ್ತಾಗಿ ನಡೆಯಲಿದೆ.

ಸ್ಥಳೀಯರಿಗೆ ಮಧುಕರ್ ಅವರ ಒಡನಾಟ ಕಮ್ಮಿಯಾದರೂ ಅವರ ಸಾಧನೆಗಳ ಬಗ್ಗೆ ಹೆಮ್ಮೆ ಇದೆ. ಬಾಲ್ಯದಲ್ಲಿ ಮಧುಕರ್ ಅವರನ್ನು ಎತ್ತಿ ಆಡಿಸಿದ್ದ ವನಜ ಎಂಬ ಮಹಿಳೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

Facebook Comments

comments