Connect with us

    LATEST NEWS

    ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಮ್ಯಾಚ್ ನಲ್ಲಿ ಕೇವಲ 10 ರನ್ ಗೆ ಆಲೌಟ್

    ಮಲೇಷ್ಯಾ ಸೆಪ್ಟೆಂಬರ್ 06: ಅಂತರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ನಲ್ಲಿ ಕೇವಲ 10 ರನ್ ಗೆ ತಂಡ ಆಲೌಟ್ ಆದ ಘಟನೆ ಮಂಗೋಲಿಯಾದಲ್ಲಿ ನಡೆದಿದೆ.


    ಮಂಗೋಲಿಯಾ ಹಾಗೂ ಸಿಂಗಾಪುರದ ನಡುವೆ ಏಷ್ಯಾ ಕಪ್ ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಂದ್ಯದಲ್ಲಿ ಮಂಗೋಲಿಯಾ ಕೇವಲ 10 ರನ್ನಿಗೆ ಆಲೌಟ್ ಆಗಿದೆ. ಈ ಗುರಿ ಬೆನ್ನಟ್ಟಿದ ಸಿಂಗಪುರ ಒಂದು ವಿಕೆಟ್ ನಷ್ಟಕ್ಕೆ ಕೇವಲ ಐದು ಎಸೆತಗಳಲ್ಲಿ ಗೆಲುವು ದಾಖಲಿಸಿತು.

    ಇದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವೊಂದರಿಂದ ದಾಖಲಾದ ಕನಿಷ್ಠ ಮೊತ್ತವಾಗಿದೆ. ಕಳೆದ ವರ್ಷ ಸ್ಪೇನ್ ವಿರುದ್ಧ ಐಲ್ ಆಫ್ ಮ್ಯಾನ್ ತಂಡ ಕೂಡ ಕೇವಲ 10 ರನ್ನಿಗೆ ಆಲೌಟ್ ಆಗಿತ್ತು.
    ಸಿಂಗಪುರದ ಪರ ಹರ್ಷ ಭಾರಧ್ವಾಜ್ ನಾಲ್ಕು ಓವರ್‌ಗಳಲ್ಲಿ ಕೇವಲ ಮೂರು ರನ್ನಿಗೆ ಆರು ವಿಕೆಟ್ ಕಬಳಿಸಿದರು. ಮಂಗೋಲಿಯಾದ ಬ್ಯಾಟಿಂಗ್ ಕಾರ್ಡ್ ಇಂತಿತ್ತು: 0, 1, 0, 1, 2, 0, 0, 1, 2, 0, 1
    ಎರಡು ರನ್ ಇತರೆ ರನ್ ರೂಪದಲ್ಲಿ ಬಂದಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply