BANTWAL
ಪವಿತ್ರ ಕ್ಷೇತ್ರ ಮಕ್ಕಾಗೆ ವಾಟ್ಸಾಪ್ ನಲ್ಲಿ ಅವಮಾನ : ಯುವಕನ ಬಂಧನ
ಪವಿತ್ರ ಕ್ಷೇತ್ರ ಮಕ್ಕಾಗೆ ವಾಟ್ಸಾಪ್ ನಲ್ಲಿ ಅವಮಾನ : ಯುವಕನ ಬಂಧನ
ಬಂಟ್ವಾಳ, ಡಿಸೆಂಬರ್ 16 : ಪವಿತ್ರ ಕ್ಷೇತ್ರ ಮಕ್ಕಾಗೆ ವಾಟ್ಸಾಪ್ ನಲ್ಲಿ ಅವಮಾನ ಮಾಡುವ ಮೂಲಕ ಕೋಮು ಸಾಮರಸ್ಯ ಕದಡಲು ಯತ್ನಿಸುತ್ತಿದ್ದ ಯುವಕನನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶಿವಾಲಯದ ನಿವಾಸಿ ಸುರೇಶ್ ಎಂದು ಗುರುತಿಸಲಾಗಿದೆ.
ಈತ ಮುಸ್ಲಿಂ ಪವಿತ್ರ ಕ್ಷೇತ್ರವಾದ ಮಕ್ಕಾ ಚಿತ್ರದಲ್ಲಿ ಆಂಜನೇಯ ಫೋಟೊವನ್ನು ಬಳಸಿ ವಾಟ್ಸ್ ಅಪ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದ ಮತ್ತು ಡಿಪಿಯಾಗಿ ಬಳಸಿದ್ದ.
ಈ ಕುರಿತು ಪವಿತ್ರ ಸ್ಥಳದ ನಂಬಿಕೆಯನ್ನು ಅಪಮಾನಗೊಳಿಸಿದ್ದಾನೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ದೂರು ಸ್ವೀಕರಿಸಿದ್ದ ಬಂಟ್ವಾಳ ಗ್ರಾಮಾಂತರ ಪೋಲಿಸರು ಮಂಗಳೂರಲ್ಲಿ ಸುರೇಶನನ್ನು ಬಂಧಿಸಿದ್ದಾರೆ.
You must be logged in to post a comment Login