Connect with us

UDUPI

ಕೊರೊನಾ ಸೊಂಕಿತನಾದರೂ ವರನಟ ರಾಜ್ ಕುಮಾರ್ ಅಭಿಮಾನಿಯ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಯ್ತು ಈ ವಿಡಿಯೋ

ಉಡುಪಿ ಜುಲೈ 7: ಕೊರೋನಾ ಹೆಸರು ಕೇಳಿದ್ರೂ ಜನ ನಿದ್ದೆಯಲ್ಲೂ ಬೆಚ್ಚಿ ಬೀಳ್ತಾರೆ. ಆದರೆ ಇಲ್ಲೊಬ್ರು ಕೊರೋನಾ ಪಾಸಿಟಿವ್‌ ಬಂದಿದ್ರೂ ದೃತಿಗೆಡದೆ, ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ, ತಾನು ಋಷಿಯಾಗಿದ್ದು, ನೃತ್ಯ ಮಾಡುತ್ತಾ ಮನೆಯವರನ್ನು ಖುಷಿಪಡಿಸಿದ್ದಾರೆ. ತನಗೆ ಕೊರೋನಾ ಪಾಸಿಟಿವ್‌ ಮಾತ್ರವಲ್ಲ, ತನ್ನಲ್ಲೂ ಪಾಸಿಟಿವಿಟಿ ಇದೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಸದ್ಯ ಅಣ್ಣಾವ್ರ್ ಅಭಿಯಾನಿಯ ನೃತ್ಯದ ವೀಡಿಯೋ ಭಾರೀ ವೈರಲ್ ಆಗುತ್ತಿದೆ.


ಉಡುಪಿ ಜಿಲ್ಲೆಯ ಕೋಟದ ಹೋಟೆಲ್ ಮಾಲೀಕರಾಗಿರುವ ಇವರು ಕೊರೊನಾ ಸೋಂಕಿತರಾಗಿದ್ದು, ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾಲೀಕರಿಗೆ ಸೋಂಕು ತಗುಲಿದ ಹಿನ್ನೆಲೆ ಹೋಟೆಲ್ ಕೆಲಸಗಾರರು, ಗ್ರಾಹಕರು ಮತ್ತು ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ಕುಟುಂಬಸ್ಥರಿಗೆ ನಾನು ಚೆನ್ನಾಗಿದ್ದಾನೆ ಎಂದು ವಿಡಿಯೋ ಸಂದೇಶ ಕಳಿಸಿದ್ದಾರೆ. ಹಾಗೆ ರಾಜ್‍ಕುಮಾರ್ ಅಭಿಮಾನಿಯಾಗಿರುವರಿಂದ ಅವರ ಹಾಡಿಗೆ ಡ್ಯಾನ್ಸ್ ಸಹ ಮಾಡಿದ್ದಾರೆ.
ತಾನು ಆರೋಗ್ಯವಾಗಿದ್ದು, ಮನೆಯ ಉಳಿದ ಸದಸ್ಯರು ಭಯ ಭೀತರಾಗಬಾರದು ಎನ್ನುವ ಉದ್ದೇಶಕ್ಕೆ ನೃತ್ಯ ಮಾಡಿ ಖುಷಿ ಹಂಚಿದ್ದಾರೆ.

 

https://youtu.be/4Qw2JU3dmNg

Facebook Comments

comments