Connect with us

UDUPI

ಮಲ್ಪೆ – ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ

ಉಡುಪಿ ಜುಲೈ 7: ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯ ಲಕ್ಷ್ಮೀಂದ್ರ ನಗರ ಶಾಲೆಯ ಬಳಿ ನಿನ್ನೆ ರಾತ್ರಿ ನಡೆದಿದೆ. ಮೃತ ಯುವಕನನ್ನು ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರ ನಿವಾಸಿ ಯೋಗಿಶ್ ಪೂಜಾರಿ (28) ಎಂದು ಗುರುತಿಸಲಾಗಿದೆ.


ಪ್ರಾಥಮಿಕ ಮಾಹಿತಿಗಳ ಪ್ರಕಾರ ವಕ್ವಾಡಿ ಪ್ರವೀಣ್ ಹತ್ಯೆಯ ಆರೋಪಿಗಳಾದ ಸುಜಿತ್ ಪಿಂಟೋ ಸಹಚರರಿದ್ದ 5-6 ಮಂದಿ ದುಷ್ಕರ್ಮಿಗಳು ಗುಂಪಿನೊಂದಿಗೆ ಕ್ಷುಲ್ಲಕ ವಿಷಯಕ್ಕಾಗಿ ಯೋಗಿಶ್ ಪೂಜಾರಿಯ ಜೊತೆ ಲಕ್ಷ್ಮೀನಗರದಲ್ಲಿ ಸೋಮವಾರ ರಾತ್ರಿ ಗಲಾಟೆ ನಡೆದಿದ್ದು ಈ ವೇಳೆ ದುಷ್ಕರ್ಮಿಗಳು ಯೋಗಿಶ್ ಪೂಜಾರಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಯೋಗೀಶ್ ಪೂಜಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಮಲ್ಪೆ ಪೊಲೀಸರು ಬಲೆ ಬೀಸಿದ್ದಾರೆ

Facebook Comments

comments