Connect with us

    UDUPI

    ಮಳೆಗಾಲದ ಜ್ವರ ಎಂದು ನಿರ್ಲಕ್ಷ ಮಾಡಬೇಡಿ – ಉಡುಪಿ ಜಿಲ್ಲಾಧಿಕಾರಿ ಕಿವಿಮಾತು

    ಉಡುಪಿ ಜುಲೈ 7: ಮಳೆಗಾಲದಲ್ಲಿ ಬರುವ ಶೀತ, ನೆಗಡಿ, ಜ್ವರ ಲಕ್ಷಣಗಳನ್ನು ಜನರು ನಿರ್ಲಕ್ಷ ಮಾಡಬಾರದೆಂದು ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಈಗಾಗಲೇ ಜನರಲ್ಲಿ ಮಳೆಗಾಲದಲ್ಲಿ ಬರುವ ಶೀತ, ನೆಗಡಿ, ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಇಂತಹ ಶೀತ ಜ್ವರದ ಲಕ್ಷಣ ಕಂಡು ಬಂದಾಗ ಹತ್ತಿರದ ಫೀವರ್ ಕ್ಲಿನಿಕ್‌ಗೆ ಭೇಟಿ ಕೊಡಬೇಕು ಎಂದು ತಿಳಿಸಿದರು.

    ಕೊರೊನಾ ವಿಚಾರದಲ್ಲಿ ಯಾರಿಗೂ ಆತಂಕ, ಭಯ ಬೇಡ. ಜಿಲ್ಲಾಡಳಿತ ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಕೊಡಿಸುತ್ತಿದೆ ಎಂದು ಜಿ.ಜಗದೀಶ್ ಜನರಿಗೆ ಭರವಸೆ ನೀಡಿದರು.
    ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮಗಳು ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿದೆ. ಸನ್ಮಾನದ ಹೆಸರಿನಲ್ಲಿ ಆಯೋಜಕರು ಸಾಮಾಜಿಕ ಅಂತರ, ಮತ್ತಿತರ ಸರ್ಕಾರದ ನಿರ್ದೇಶನಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಯಾವುದೇ ಕಾರ್ಯಕ್ರಮಗಳು ಬೇಡ. ಕೊರೊನಾ ಹತೋಟಿಗೆ ಬಂದ ನಂತರ ಸಂಭ್ರಮಿಸಲು ಸಾಕಷ್ಟು ಕಾಲಾವಕಾಶ ಇದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply