Connect with us

LATEST NEWS

ಭಾರತೀಯ ರೈಲ್ವೆ ಹೊಸ ದಾಖಲೆ..ಅತೀ ಉದ್ದದ ಗೂಡ್ಸ್ ರೈಲಿಗೆ ಚಾಲನೆ….!!

ಮುಂಬೈ ಅಗಸ್ಟ್ 17: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ಭಾರತೀಯ ರೈಲ್ವೆ ದೇಶದ ಅತೀ ಉದ್ದದ ಗೂಡ್ಸ್ ರೈಲಿಗೆ ಚಾಲನೆ ನೀಡಿ ದಾಖಲೆ ಮೆರೆದಿದೆ.


ಭಾರತೀಯ ರೇಲ್ವೆಯ ಆಗ್ನೇಯ ಕೇಂದ್ರೀಯ ವಿಭಾಗದಿಂದ ಚಾಲನೆಗೊಂಡಿರುವ ಸೂಪರ್ ವಾಸುಕಿ ಹೆಸರಿನ ಈ ರೈಲು ಮೂರೂವರೆ ಕಿಲೋಮೀಟರ್ ಉದ್ದವಿದ್ದು ಒಟ್ಟಾರೆ 25,962 ಟನ್ ತೂಕ ಲೋಡ್ ಆಗಿರುವ 295 ವ್ಯಾಗನ್ ಗಳನ್ನು ಎಳೆದೊಯ್ಯುತ್ತದೆ.

ಟ್ರೈನು ಒಟ್ಟು 6 ಇಂಜಿನ್ ಗಳನ್ನು ಹೊಂದಿದೆ. ರೇಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಸೂಪರ್ ವಾಸುಕಿ ಕೊಠಾರಿ ರೋಡ್ ಸ್ಟೇಶನ್ ಮೂಲಕ ಹಾದುಹೋಗುತ್ತಿದೆ. ರೈಲಿನ ವ್ಯಾಗನ್ ಗಳು ಒಂದಾದ ನಂತರ ಮತ್ತೊಂದು ದಾಟಿ ಹೋಗುವುದು ನಮಗೆ ಕಾಣುತ್ತದೆಯೇ ಹೊರತು ಅದರ ಕೊನೆ ಕಾಣುವುದೇ ಇಲ್ಲ, ಅಷ್ಟು ಉದ್ದವಾಗಿದೆ ಈ ಟ್ರೈನು…!

Advertisement
Click to comment

You must be logged in to post a comment Login

Leave a Reply