LATEST NEWS
ಏರಿಕೆಯತ್ತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಏರಿಕೆಯತ್ತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ
ಮಂಗಳೂರು ಮೇ 14: ಕರ್ನಾಟಕದ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಳೆದ ಕೆಲವು ವಾರಗಳಿಂದ ಏರಿಕೆಯಾಗದೇ ಇದ್ದು ಪೆಟ್ರೋಲ್ ಡೀಸೆಲ್ ಬೆಲೆಗಳು ಮತದಾನ ಮುಗಿಯುತ್ತಿದ್ದಂತೆ ಹೆಚ್ಚಳವಾಗಿವೆ.
ತೈಲ ಕಂಪನಿಗಳು ಲೀಟರ್ ಪೆಟ್ರೋಲ್‍ಗೆ 17 ಪೈಸೆ, ಡೀಸೆಲ್‍ಗೆ 21 ಪೈಸೆಯಷ್ಟು ಹೆಚ್ಚಿಸಿವೆ. ದಿನಂಪ್ರತಿ ಬೆಲೆ ಏರಿಳಿಕೆ ಆಗುತ್ತಿದ್ದ ಪೆಟ್ರೋಲ್, ಡಿಸೆಲ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದುಬಾರಿ ಮತ್ತು ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿದ್ದರೂ ಏಪ್ರಿಲ್ 24ರಿಂದ ಭಾನುವಾರದವರೆಗೆ ದರ ಏರಿಕೆ ಮಾಡಿರಲಿಲ್ಲ.

ಗುಜರಾತ್ ಚುನಾವಣೆ ವೇಳೆಯೂ ಇದೇ ತಂತ್ರ ಅನುಸರಿಸಲಾಗಿತ್ತು. ಮೂಲಗಳ ಪ್ರಕಾರ ಪೆಟ್ರೋಲ್ ಲೀಟರ್ ಗೆ 3 ರೂಪಾಯಿಯಷ್ಟು, ಡೀಸೆಲ್ 1 ರೂಪಾಯಿ 50 ಪೈಸೆಯಷ್ಟು ದುಬಾರಿಯಾಗಲಿದೆ.