Connect with us

    LATEST NEWS

    ವೋಟ್ ಹಾಕದ ರಮ್ಯಾ ವಿರುದ್ದ ಕಿಡಿಕಾರಿದ ಟ್ವೀಟಿಗರು

    ವೋಟ್ ಹಾಕದ ರಮ್ಯಾ ವಿರುದ್ದ ಕಿಡಿಕಾರಿದ ಟ್ವೀಟಿಗರು

    ಬೆಂಗಳೂರು ಮೇ14: ಮತದಾನ ನಮ್ಮೆಲ್ಲರ ಹಕ್ಕು.. ಕಾಂಗ್ರೆಸ್ ಗೆ ಮತ ನೀಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದ ನಟಿ ಹಾಗೂ ಹಾಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ದ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ಕಾಂಗ್ರೇಸ್ ನ ಪ್ರಮುಖ ಹುದ್ದೆಯಲ್ಲಿರುವ ರಮ್ಯಾ ಸಾರ್ವಜನಿಕರಲ್ಲಿ ಮತದಾನ ನಮ್ಮೆಲ್ಲರ ಹಕ್ಕು ಯೋಚಿಸಿ ಮತದಾನ ಮಾಡಿ ಎಂದು ಪ್ರಚಾರ ಮಾಡುತ್ತಿದ್ದರು. ಆದರೆ ಅವರೇ ಮತ ಚಲಾಯಿಸದೆ ಇರುವುದರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

    ಮಂಡ್ಯದ ಕೆ.ಆರ್ ರಸ್ತೆಯ ಪಿಎಲ್‍ಡಿ ಬ್ಯಾಂಕ್ ಮತಗಟ್ಟೆಯಲ್ಲಿ ರಮ್ಯಾ ಅವರು ಮತದಾನ ಮಾಡಬೇಕಾಗಿತ್ತು. ಆದರೆ ಇದೀಗ ಅವರು ಮತದಾನ ಮಾಡದೆ ದೂರು ಉಳಿದಿದ್ದರಿಂದ ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೋಟು ಮಾಡದವರಿಗೆ ರಾಜಕೀಯ ಮಾತಾನಾಡುವ ನೈತಿಕತೆ ಎಲ್ಲಿದೆ ಎಂದು ಟ್ವೀಟಿಗರು ತರಾಟೆಗೆ ತೆಗೆದುಕೊಂಡಿದ್ದು, ‘ನಂಬರ್ ಒನ್ ಸಿಟಿಜನ್’ ಅಂತ ಲೇವಡಿ ಮಾಡಿದ್ದಾರೆ.

    ಮತ್ತೆ ಕೆಲವರು ರಮ್ಯಾ ವೋಟು ಮಾಡಿಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗೋಕೆ ಹೇಳಿ ಅಂತಾ ಜನರು ಕಿಡಿ ಕಾರಿದ್ದು, ಮೊದಲು ವೋಟ್ ಮಾಡಿ ಜವಾಬ್ದಾರಿ ಕಲಿಯಿರಿ ಎಂದು ರಮ್ಯಾ ಅವರಿಗೆ ಅಂತಾ ಟಾಂಗ್ ಕೊಟ್ಟಿದ್ದಾರೆ.

    ನಿನ್ನೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ದಿನ ಹಲವು ಮಂದಿ ಮತದಾನ ಮಾಡಿಲ್ಲ. ಅದರಲ್ಲಿ ನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರ ಪತ್ನಿ ಸುಮಲತಾ ಅವರೂ ಕೂಡ ಇದ್ದಾರೆ. ನಿನ್ನೆ ನಟ ಅಂಬರೀಶ್ ಅವರು ಮಂಡ್ಯಗೆ ಆಗಮಿಸಿ ಮತದಾನ ಮಾಡಿದ್ದರು. ಆದರೆ ಅವರೊಂದಿಗೆ ಸುಮಲತಾ ಅವರು ಕಾಣಿಸಲಿಲ್ಲ.

    ಇದೀಗ ಮತದಾನ ಮಾಡದ ನಟ-ನಟಿಯರ ವಿರುದ್ಧದ #NotVoted ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply