LATEST NEWS
ಮಗನಿಗೆ ಥಳಿಸದಂತೆ ಮಗನ ಮೇಲೆ ಮಲಗಿದ ತಾಯಿ – ಆದರೂ ಬಿಡದೆ ಹೊಡೆದು ಸಾಯಿಸಿದ ಪಾಪಿಗಳು..!!

ಮುಂಬೈ ಅಕ್ಟೋಬರ್ 14: ಮಲಾಡ್ ಪೂರ್ವದಲ್ಲಿ 27 ವರ್ಷದ ವ್ಯಕ್ತಿಯನ್ನು ಗುಂಪೊಂದು ಆತನ ಕುಟುಂಬದವರ ಮುಂದೆ ಬರ್ಬರವಾಗಿ ಹೊಡೆದು ಕೊಂದಿರುವ ದಾರುಣ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಮಲಾಡ್ ಪೂರ್ವದ ದಿಂಡೋಶಿ ಪ್ರದೇಶದ ಎಂಎನ್‌ಎಸ್ ಕಾರ್ಯಕರ್ತನ ಮಗ ಆಕಾಶ್ ಮೈನ್ (27) ನನ್ನು ರಿಕ್ಷಾ ಚಾಲಕರು ಮತ್ತು ಸ್ಥಳೀಯ ಮಾರಾಟಗಾರರು ಹೊಡೆದು ಕೊಂದಿದ್ದಾರೆ.
ಯುವಕನಿಗೆ ಹಲ್ಲೆ ನಡೆಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಯವರ ಎದುರೇ ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಜನಸಮೂಹದಿಂದ ಮಗನನ್ನು ರಕ್ಷಿಸಲು ಅವನ ತಾಯಿ ಅವನ ದೇಹದ ಮೇಲೆ ಮಲಗಿದಳು. ಅಲ್ಲದೆ ತಂದೆ ಕೂಡ ಮಗನ ರಕ್ಷಿಸಲು ಪ್ರಯತ್ನಿಸಿದರೂ ಗುಂಪು ತಂದೆಯ ಮೇಲೂ ಮನಬಂದಂತೆ ಹಲ್ಲೆ ನಡೆಸಿದೆ.
ಶನಿವಾರದಂದು ದಸರಾ ಆಚರಣೆಗಾಗಿ ಹೊಸ ಕಾರು ಖರೀದಿಸಲು ಮೈನ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮಲಾಡ್ ರೈಲು ನಿಲ್ದಾಣದ ಬಳಿ ಆಟೋವೊಂದು ಅವರ ಕಾರನ್ನು ಹಿಂದಿಕ್ಕಿತು. ನಂತರ ಆಕಾಶ್ ಮತ್ತು ರಿಕ್ಷಾ ಚಾಲಕನ ನಡುವೆ ವಾಗ್ವಾದ ನಡೆಯಿತು. ಬಳಿಕ ಪರಿಸ್ಥಿತಿ ಕೈ ಮೀರಿದ್ದು ರಿಕ್ಷಾ ಚಾಲಕನು ತನ್ನ ಸ್ನೇಹಿತರು ಮತ್ತು ಸ್ಥಳೀಯ ಮಾರಾಟಗಾರರೊಂದಿಗೆ ಸೇರಿಕೊಂಡು MNS ಕಾರ್ಯಕರ್ತನ ಮಗನ ಮೇಲೆ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.

ಮುಂಬೈನ ದಿಂಡೋಶಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು 9 ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಅವರೆಲ್ಲರನ್ನೂ ಅಕ್ಟೋಬರ್ 22 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ ಎಂದು ಮುಂಬೈ ಪೊಲೀಸ್ ತಿಳಿಸಿದ್ದಾರೆ.
Shocking!
⚠️⛔️ WARNING ⛔️⚠️In Mumbai (#Maharashtra), a man was brutally be@ten to de@th in front of his father, mother, & wife in a road rage
In a desperate bid to protect him, his mother lay over his body, trying to shield him.
Heartbreaking https://t.co/aClDVcE9JA pic.twitter.com/rI5eBzvHaA— Gopinathan Vijayaraman (@gopinathvijay91) October 14, 2024