LATEST NEWS
ಅಕ್ರಮ ಸಂಬಂಧ: ಪ್ರಿಯಕರನೊಂದಿಗೇ ಮದ್ವೆ ಮಾಡಿಸಿದ ಪತಿ

ಲಕ್ನೋ, ಮಾರ್ಚ್ 27: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ, ಆಕೆಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದ ವಿಚಿತ್ರ ಪ್ರಸಂಗ ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದಿದೆ.
2017ರಲ್ಲಿ ಬಬ್ಲೂ ಹಾಗೂ ರಾಧಿಕಾ ವಿವಾಹವಾಗಿದ್ದು, ದಂಪತಿಗೆ ಏಳು ಹಾಗೂ ಒಂಬತ್ತು ವರ್ಷದ ಇಬ್ಬರು ಮಕ್ಕಳಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಬಬ್ಲೂ ಹೆಚ್ಚಿನ ಸಮಯ ಮನೆಯಿಂದ ದೂರವಿದ್ದು, ಕೆಲಸ ಮಾಡುತ್ತಿದ್ದರು. ಈ ವೇಳೆ ರಾಧಿಕಾ ಅದೇ ಹಳ್ಳಿಯ ಓರ್ವ ಯುವಕನನ್ನು ಇಷ್ಟಪಡಲು ಪ್ರಾರಂಭಿಸಿದ್ದಳು. ಬಳಿಕ ಇದು ಪ್ರೀತಿಗೆ ತಿರುಗಿ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು.ಮಚ್ಚು ಹಿಡಿದ ವಿನಯ್ ಗೌಡ, ರಜತ್ ಕಿಶನ್ ಗೆ 3 ದಿನ ಪೊಲೀಸ್ ಕಸ್ಟಡಿಗೆ

ದೀರ್ಘಕಾಲದಿಂದ ನಡೆದಿದ್ದ ಈ ಅಕ್ರಮ ಸಂಬಂಧದ ಬಗ್ಗೆ ಒಂದು ದಿನ ಬಬ್ಲೂ ಕುಟುಂಬದವರಿಗೆ ತಿಳಿಯಿತು. ಬಳಿಕ ವಿಷಯ ತಿಳಿದ ಬಬ್ಲೂ ರಾಧಿಕಾಗೆ ಒಂದು ಆಯ್ಕೆ ನೀಡಿದನು. ಪ್ರಿಯಕರ ಅಥವಾ ಪತಿ ಎಂಬ ಆಯ್ಕೆ ನೀಡಿದಾಗ ರಾಧಿಕಾ ಪ್ರಿಯಕರನನ್ನು ಆರಿಸಿಕೊಂಡಳು. ಇದನ್ನು ಒಪ್ಪಿದ ಬಬ್ಲೂ ಪ್ರಿಯಕರನೊಂದಿಗೆ ಮದುವೆ ನಿಶ್ಚಯಿಸಿ, ಹಳ್ಳಿಯ ಜನರಿಗೆ ತಿಳಿಸಿದ.
ಇದಕ್ಕೂ ಮುನ್ನ ಮೊದಲು ನ್ಯಾಯಾಲಯಕ್ಕೆ ತೆರಳಿ ರಾಧಿಕಾ ಹಾಗೂ ಆಕೆಯ ಪ್ರಿಯಕರನ ಮದುವೆ ಮಾಡಿಸಿ, ಬಳಿಕ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಹೂಮಾಲೆ ಬದಲಿಸಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಹಕರಿಸಿದರು. ಇನ್ನೂ ಬಬ್ಲೂ ತನ್ನ ಎರಡು ಮಕ್ಕಳನ್ನು ತಾನೇ ನೋಡಿಕೊಳ್ಳುವುದಾಗಿಯೂ ತಿಳಿಸಿದ್ದಾರೆ.
1 Comment