ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪುತ್ತೂರ ವಿಟ್ಲ ರಸ್ತೆಯ ಕಬಕದಲ್ಲಿನ ಅನಧಿಕೃತ ಅಂಗಡಿಗಳ ತೆರವು

ಮಂಗಳೂರು ನವೆಂಬರ್ 7: ಪುತ್ತೂರು ವಿಟ್ಲ ರಸ್ತೆಯ ಕಬಕದಲ್ಲಿನ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಸಲಾಯಿತು.

ಅನಧಿಕೃತ ಅಂಗಡಿಗಳ ತೆರವುಗೊಳಿಸಲು ಗ್ರಾಮ ಪಂಚಾಯತ್ ನಿಂದ ನೋಟೀಸ್ ನೀಡಿತ್ತು. ಆದರೆ ಅಂಗಡಿಗಳನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಸ್ಥಳೀಯ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಕೋರ್ಟ್ ಅಂಗಡಿಗಳ ತೆರವಿಗೆ ಆದೇಶ ನೀಡಿದೆ.

ಈ ಹಿನ್ನಲೆಯಲ್ಲಿ ಪುತ್ತೂರು ತಹಶೀಲ್ದಾರ್‌ರವರ ಉಪಸ್ಥಿತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜೆಸಿಬಿಯಿಂದ ಸುಮಾರು 12 ಅಂಗಡಿಗಳನ್ನು ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ನಡುವೆ ಅಂಗಡಿ ತೆರವಿಗೆ ಸಂಬಂಧಿಸಿ ಅಂಗಡಿ ಹೊಂದಿರುವವರು ಹೈಕೋರ್ಟ್‌ ಮೊರೆ ಹೋಗಿದ್ದು, ಹೈಕೋರ್ಟ್ ಅಂಗಡಿಗಳ ತೆರವಿಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು. ಆದರೆ ತಡೆಯಾಜ್ಞೆ ನೋಟೀಸ್ ನೀಡುವ ವೇಳೆ ಬಹುತೇಕ ಅಂಗಡಿಗಳ ತೆರವು ಆಗಿತ್ತು.