Connect with us

LATEST NEWS

ಮಂಗಳೂರು ವಿಮಾನ ನಿಲ್ದಾಣದಲ್ಲಿ 70 ಲಕ್ಷದ ಅಕ್ರಮ ಚಿನ್ನ ವಶಕ್ಕೆ…!!

ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 322 ಗ್ರಾಂ ಮತ್ತು 857 ಗ್ರಾಂ ತೂಕದ ಚಿನ್ನದ ವಸ್ತುಗಳನ್ನು ಪತ್ತೆ ಮಾಡಲಾಗಿದೆ.

ನವೆಂಬರ್8 ಮತ್ತು 13ರಂದು ಇಂಡಿಗೋ ಫ್ಲೈಟ್ 6E1163 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರನ್ನು ತಡೆದು ಪರಿಶೀಲನೆ ನಡೆಸಲಾಗಿದೆ.

ಈ ವೇಳೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 21.6/24 ಕ್ಯಾರೆಟ್ ಚಿನ್ನವನ್ನು ಟ್ರಾಲಿ ಬ್ಯಾಗ್‌ನಲ್ಲಿ ಮಣಿ ಹಾಕುವ ರಾಡ್‌ಗಳ ರೂಪದಲ್ಲಿ, ಮಣಿಕಟ್ಟಿನ ಗಡಿಯಾರ, ಬಾಲ್-ಪಾಯಿಂಟ್ ಪೆನ್, ಹೇರ್ ಟ್ರಿಮ್ಮರ್, ಸ್ಟೀಲ್ ವೂಲ್ ಸ್ಕ್ರಬರ್ ಮತ್ತು ಒಂದು ರೋಡಿಯಂ ಲೇಪಿತ ನಾಣ್ಯವನ್ನು ಪತ್ತೆ ಮಾಡಲಾಗಿದೆ. ಒಟ್ಟು 322 ಗ್ರಾಂ ತೂಕದ 18,17,718 ರೂ ಮೌಲ್ಯದ ವಸ್ತುಗಳು ಪತ್ತೆಯಾಗಿದೆ.

ನ.18ರಂದು ಅಧಿಕಾರಿಗಳು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಚೆಕ್-ಇನ್ ಬ್ಯಾಗೇಜ್ ಸ್ಕ್ಯಾನ್ ಮಾಡುವಾಗ, ಕೆಲವು ಕಪ್ಪು ಚಿತ್ರಗಳು ಭಾರೀ ಲೋಹದ ಇರುವಿಕೆಯನ್ನು ಸೂಚಿಸುವ ವಸ್ತುಗಳು ಕಂಡುಬಂದಿವೆ.
ಪರಿಶೀಲನೆ ನಡೆಸಿದಾಗ ಎರಡು ಕಾರ್ ಸ್ಪೀಕರ್‌ ಗಳಲ್ಲಿ 2 ವೃತ್ತಾಕಾರದ ತುಂಡುಗಳು, ಏರ್‌ಪಾಡ್‌ ನಲ್ಲಿ 2 ಆಯತಾಕಾರದ ಕಟ್ ತುಂಡುಗಳು ಮತ್ತು ಪವರ್ ಅಡಾಪ್ಟರ್‌ ನಲ್ಲಿ ಒಂದು ಆಯತಾಕಾರದ ತುಂಡು ಚಿನ್ನ ಪತ್ತೆಯಾಗಿದೆ. 51,84,850 ರೂ ಮೌಲ್ಯದ 857 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
Share Information
Advertisement
Click to comment

You must be logged in to post a comment Login

Leave a Reply