Connect with us

DAKSHINA KANNADA

ಅಕ್ರಮ ಮರಸಾಗಾಟ ವರದಿ ಮಾಡಲು ಹೊರಟ ಪರ್ತಕರ್ತರ ಮೇಲೆ ಪ್ರಕರಣ ದಾಖಲಿಸಲು ಮುಂದಾದ ಮಂಗಳೂರು ಸಂಚಾರಿ ದಳದ ಪ್ರಭಾರ ವಲಯಾರಣ್ಯಧಿಕಾರಿ

ಸುಬ್ರಹ್ಮಣ್ಯ ಫೆಬ್ರವರಿ 8: ಸುಬ್ರಹ್ಮಣ್ಯ ವಲಯ ಐತ್ತೂರು ರಕ್ಷಿತಾರಣ್ಯದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನಲೆ ಪರಿಶೀಲನೆಗೆ ಆಗಮಿಸಿದ ತನಿಖಾಧಿಕಾರಿಗಳು ಮಾದ್ಯಮದವರನ್ನು ತಡೆದು ಸ್ಥಳಕ್ಕೆ ತೆರಳದಂತೆ ನಿರ್ಬಂಧ ವಿಧಿಸಿದ ಘಟನ ಇಂದು ನಡೆದಿದ್ದು, ಮಾಧ್ಯಮವರ ಮೇಲೆ ಅರಣ್ಯ ಅತಿಕ್ರಮ ಪ್ರವೇಶದ ಕೇಸ್ ದಾಖಲಿಸುತ್ತೆವೆ ಎಂಬ ಬೆದರಿಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಒಡ್ಡಿದ್ದಾರೆ.


ಸುಬ್ರಹ್ಮಣ್ಯ ವಲಯದ ಐತ್ತೂರು ಸುಂಕದಕಟ್ಟೆ, ಬಿಳಿನೆಲೆ, ಕೊಣಾಜೆ, ಮುಜೂರು ಮುಂತಾದ ರಕ್ಷಿತಾರಣ್ಯ ಪ್ರದೇಶದಲ್ಲಿ ಬೆಲೆ ಬಾಳುವ ಬೀಟೆ, ಸಾಗುವಾನಿ, ಬೇಂಗ, ಹೆಬ್ಬಲಸು, ಬೋವು ಹಾಗೂ ಇನ್ನೀತರ ಕಾಟು ಜಾತಿಯ ಮರಗಳನ್ನು ಕಡಿದು ಅದನ್ನು ಕೇರಳ ಭಾಗಕ್ಕೆ ಹಾಗೂ ಸ್ಥಳೀಯ ಮಿಲ್ಲುಗಳಿಗೆ ಮರಗಳ್ಳರು ಮಾರಾಟ ಮಾಡಿದ್ದಾರೆ, ಅಲ್ಲದೆ ಹಲವಾರು ಮರಗಳನ್ನು ಕಡಿದು ಹಾಕಿರುವುದು ಕಂಡು ಬಂದಿದೆ ಈ ಹಿನ್ನಲೆ ಸ್ಥಳೀಯರು ಕಡಿದಿರುವ ಮರಗಳ ಕುತ್ತಿಗಳು ಹಾಗೂ ಮರದ ದಿಮ್ಮಿಗಳಿರುವ ಸ್ಥಳಗಳ ಜಿಪಿಎಸ್ ಚಿತ್ರ ಸಮೇತ ಅರಣ್ಯ ಸಂಚಾರ ದಳಕ್ಕೆ ಕೆಲ ದಿನಗಳ ಹಿಂದೆ ದೂರು ನೀಡಿದ್ದರು.


ಅದರಂತೆ ಫೆಬ್ರವರಿ 6ರಂದು ಸಂಚಾರ ದಳದ ಅಧಿಕಾರಿಗಳು ತನಿಖೆಗೆ ಸ್ಥಳಕ್ಕೆ ಬರುವ ಬಗ್ಗೆ ದೂರುದಾರರಿಗೆ ಮಾಹಿತಿ ನೀಡಿದ್ದರು, ಆದರೆ ಅಂದು ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ, ಇದೀಗ ಬೆಳಿಗ್ಗೆ ಬರುವುದಾಗಿ ದೂರುದಾರರಿಗೆ ತಿಳಿಸಿದ್ದು ಆದರೆ ಅಪರಾಹ್ನ 12 ಗಂಟೆ ಕಳೆದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಬಂದರು.


ಈ ನಡುವೆ ತನಿಖಾಧಿಕಾರಿಗಳು ಬರು ವ ಹಿನ್ನಲೆ ವರದಿ ಮಾಡಲು ತೆರಳಿದ್ದ ಪರ್ತಕರ್ತರನ್ನು ಕಂಡಡ ಮಂಗಳೂರು ಸಂಚಾರಿ ದಳದ ಪ್ರಭಾರ ವಲಯಾರಣ್ಯಧಿಕಾರಿ ಸಂದ್ಯಾ ಅವರು ಮಾಧ್ಯಮ ಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಸ್ಥಳಕ್ಕೆ ಬರಬಾರದು, ನಿಮಗೇನು ಅಲ್ಲಿ ಕೆಲಸ, ದೂರುದಾರರು ಮತ್ತು ನಾವು ಮಾತ್ರ ಹೋಗುತ್ತೇವೆ, ನೀವು ಬಂದರೆ ನಿಮ್ಮದು ಅತಿಕ್ರಮಣ ಪ್ರವೇಶ ಆಗುತ್ತದೆ ಮಾಧ್ಯಮವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಚಾರ ದಳದ ವಲಯಾರಣ್ಯಧಿಕಾರಿ ಜತೆ ಮಾತನಾಡಿದ ಪತ್ರಕರ್ತರು ನಾವು ಮಾತ್ರ ಅರಣ್ಯಕ್ಕೆ ಹೋಗುತ್ತಿಲ್ಲ, ಅಧಿಕಾರಿಗಳು ಮತ್ತು ದೂರುದಾರರು ಇರುವ ಸಂದರ್ಭದಲ್ಲಿ ವರದಿ ಮಾಡಲು ಸ್ಥಳಕ್ಕೆ ಬರುತ್ತಿದ್ದೆವೆ, ನಾವೇನು ಅಲ್ಲಿ ಮರ ಕದಿಯಲು ಬರುತ್ತಿದ್ದೆವಾ ಎಂದು ಪ್ರಶ್ನಿಸಿದರು. ಇದಕ್ಕೆ ಮಾತನಾಡಿದ ಸಂದ್ಯಾ ಅವರು ನೀವು ಈಗಲೇ ವರದಿ ಮಾಡಬಾರದು ಅಲ್ಲಿ ತನಿಖೆ ಆಗಬೇಕು, ನೀವೆಲ್ಲ ಹೈಲೈಟ್ಸ್ ಮಾಡಿದರೆ ನಮಗೆ ತೊಂದರೆಯಾಗುತ್ತದೆ ಎಂದು ಸಬೂಬು ಹೇಳಿದ್ದಾರೆ.


ರಕ್ಷಿತಾರಣ್ಯದಲ್ಲಿ ಲಕ್ಷಾಂತರ ಬೆಲೆ ಬಾಳುವ ಮರಗಳು ಕಳ್ಳತನ ಆಗಿ ಅಲ್ಲದೆ ಕಡಿದು ಹಾಕಲಾಗಿರುವ ದಿಮ್ಮಿಗಳು ಕಂಡು ಬರುತ್ತಿರುವ ಬಗ್ಗೆ ಸ್ಥಳೀಯರು ಸಂಚಾರ ದಳಕ್ಕೆ ನೀಡಿದ ದೂರಿನ ಅನ್ವಯ ತಡವಾಗಿಯಾದರೂ ಅಧಿಕಾರಿಗಳು ಬಂದ ವೇಳೆ, ಅಲ್ಲಿಗೆ ಮಾಧ್ಯಮದವರಿಗೆ ನಿರ್ಬಂಧ ವಿಧಿಸುವ ಔಚಿತ್ಯ ಏನಿದೆ, ಘಟನಾ ಸ್ಥಳವನ್ನು ಸರಿಯಾಗಿ ನೊಡಿಕೊಂಡು ವರದಿ ಮಾಡಿ ಸಮಾಜಕ್ಕೆ ತಿಳಿಸಬೇಕಾದ ಜವಾಬ್ದಾರಿ ಇರುವ ಮಾಧ್ಯಮ ಮಂದಿಗೆ ಇಂತಹ ಕೆಲ ಅಧಿಕಾರಿಗಳಿಂದ ತೊಂದರೆಯಾಗಿರುವುದು ನಿಜಕ್ಕೂ ಬೇಸರದ ಸಂಗತಿ ಈ ಬಗ್ಗೆ ಉನ್ನತಾಧಿಕಾರಿಗಳು ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ ಎಂಬ ಮಾತು ಕೇಳಿ ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *