Connect with us

LATEST NEWS

ಕಾಪು – ಮೀನು ಹಿಡಿಯುವ ಸಂದರ್ಭ ಬಲೆಗೆ ಸಿಕ್ಕಿ ಮೀನುಗಾರ ಸಾವು

ಕಾಪು: ಲೈಟ್ ಹೌಸ್ ಬಳಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೋರ್ವ ಬಲೆಗೆ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಮೃತಪಟ್ಟ ಮೀನುಗಾರನನ್ನು ಕಾಪು ಗರಡಿ ಬಳಿ ನಿವಾಸಿ ಕಾಸ್ಮರ್ (65) ಎಂದು ಗುರುತಿಸಲಾಗಿದೆ.


ಸೋಮವಾರ ಬೆಳಗ್ಗೆ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ಅವರು, ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆಯೇ ಬಲೆಯೊಳಗೆ‌ ಸಿಲುಕಿ, ಸಮುದ್ರಕ್ಕೆ ಬಿದ್ದು ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ. ಕಾಸ್ಮಾರ್ ನೀರಿನಲ್ಲಿ‌ ಮುಳುಗುತ್ತಿರುವುದನ್ನು ಸ್ಥಳೀಯ ಮೀನುಗಾರರು ಗಮನಿಸಿದ್ದು, ತಕ್ಷಣ ಅವರ ನೆರವಿಗೆ ಧಾವಿಸಿದರು.‌ ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಕಾಪು‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.