BANTWAL
ಪಾಣೆಮಂಗಳೂರು ನೇತ್ರಾವತಿ ನದಿ ಸಮೀಪದ ಅಕ್ರಮ ಸುಣ್ಣದ ಗೂಡುಗಳು ನೆಲಸಮ
ಪಾಣೆಮಂಗಳೂರು ನೇತ್ರಾವತಿ ನದಿ ಸಮೀಪದ ಅಕ್ರಮ ಸುಣ್ಣದ ಗೂಡುಗಳು ನೆಲಸಮ
ಬಂಟ್ವಾಳ ಸೆಪ್ಟೆಂಬರ್ 14: ಪಾಣೆಮಂಗಳೂರು ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಕಟ್ಟಲಾಗಿದ್ದ ಸುಣ್ಣದ ಗೂಡು ಕಟ್ಟಡವನ್ನು ತಾಲೂಕಾಡಳಿತ, ಪುರಸಭಾಡಳಿತ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ನೇತೃತ್ವದಲ್ಲಿ ಪೋಲೀಸರ ಬಿಗಿ ಭದ್ರತೆ ಯಲ್ಲಿ ಜೆಸಿಬಿ ಬಳಸಿ ನೆಲಸಮಮಾಡಲಾಯಿತು. ಅಕ್ರಮ ಚಟುವಟಿಕೆಗಳ ತಾಣವಾಗಿ ಸುಮಾರು ವರ್ಷಗಳಿಂದ ಸುದ್ದಿಯಾಗಿದ್ದ ಪಾಣೆಮಂಗಳೂರು ಸಮೀಪದ ಸುಮಾರು 14 ಅಕ್ರಮ ಸುಣ್ಣದ ಗೂಡು ಈ ಕಾರ್ಯಾಚರಣೆಯಿಂದಾಗಿ ನೆಲಸಮವಾಗಿದೆ.
2006ರಲ್ಲಿಯೇ ಈ ಕಟ್ಟಟದಲ್ಲಿ ಸುಣ್ಣ ತಯಾರಿಕೆಯನ್ನು ನಿಲ್ಲಿಸಲಾಗಿತ್ತು. ಭಾರೀ ಪೊಲೀಸ್ ಬಂದೋಬಸ್ತ್ ನೊಂದಿಗೆ ಮಂಗಳೂರು ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್ ರವರ ಆದೇಶದಂತೆ ಇಂದು ನಡೆದ ಕಾರ್ಯಾಚರಣೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಹಾಗೂ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ನೇತೃತ್ವದಲ್ಲಿ ಇಲಾಖಾಧಿಕಾರಿ ಗಳು ಭಾಗವಹಿಸಿದರು.