LATEST NEWS
IIFA ಅವಾರ್ಡ್ ಕಾರ್ಯಕ್ರಮದಲ್ಲಿ ತುಳುವಿನಲ್ಲಿ ಮಾತನಾಡಿದ ಸುನಿಲ್ ಶೆಟ್ಟಿ ಐಶ್ವರ್ಯ ರೈ

ಮಂಗಳೂರು ಜೂನ್ 06: ಅಬುದಾಬಿಯಲ್ಲಿ ನಡೆದ ಐಐಎಫ್ಎ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತುಳುವಿನಲ್ಲಿ ಸುನಿಲ್ ಶೆಟ್ಟಿ ಮತ್ತು ಐಶ್ವರ್ಯ ರೈ ಮಾತನಾಡಿ ತಮ್ಮ ತುಳು ಅಭಿಮಾನ ಪ್ರದರ್ಶಿಸಿದ್ದಾರೆ.
ಅಬುಧಾಬಿಯಲ್ಲಿ ನಡೆದ IIFA ಅವಾರ್ಡ್ ನಲ್ಲಿ ಬಾಲಿವುಡ್ ಸ್ಟಾರ್ ಗಳಾದ ಸುನಿಲ್ ಶೆಟ್ಟಿ, ಐಶ್ವರ್ಯ ರೈ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದ ಸುನಿಲ್ ಶೆಟ್ಟಿ ಮತ್ತು ಐಶ್ವರ್ಯ ರೈ ಬಳಿ ಮಂಗಳೂರಿನ ಆರ್ ಜೆ ಎರೊಲ್ ಅವರು ತುಳುವಿನಲ್ಲಿ ಮಾತನಾಡಲು ವಿನಂತಿಸಿದ್ದಾರೆ.

IIFA ಅವಾರ್ಡ್ ನಲ್ಲಿ ಸುನಿಲ್ ಶೆಟ್ಟಿ, ಐಶ್ವರ್ಯ ರೈ ತುಳು ಮಾತುಮೊದಲು ಸುನಿಲ್ ಶೆಟ್ಟಿ ಅವರಲ್ಲಿ ವಿನಂತಿಸಿದಾಗ ತುಳುಟ್ ದಾದ ಪನ್ಪುನಿ, ಮಸ್ತ್ ಮೋಕೆ ಮಾತೇರ್ಡಲಾ ( ತುಳುವಿನಲ್ಲಿ ಏನು ಹೇಳುವುದು. ತುಂಬಾ ಪ್ರೀತಿ ಎಲ್ಲರಲ್ಲಿಯೂ) ಎಂದಿದ್ದಾರೆ. ಬಳಿಕ ಐಶ್ವರ್ಯ ರೈ ಅವರಲ್ಲಿ ತುಳುವಿನಲ್ಲಿ ಏನಾದರೂ ಮಾತಾಡಿ ಅಂದಾಗ ” ನಮಸ್ಕಾರ, ಸೌಖ್ಯನ” ( ನಮಸ್ಕಾರ, ಸೌಖ್ಯವೆ?) ಎಂದಿದ್ದಾರೆ.ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಯ ವಿನಂತಿಗೆ ಒಂದು ವಾಕ್ಯ ಪದವನ್ನು ತುಳುವಿನಲ್ಲಿ ಮಾತಾಡಿ ಇಬ್ಬರು ಸ್ಟಾರ್ ನಟರು ತಮ್ಮ ತುಳು ಅಭಿಮಾನವನ್ನು ಪ್ರದರ್ಶಿಸಿದ್ದಾರೆ.