Connect with us

  KARNATAKA

  ನೀನು ಮುಸ್ಲಿಂ ಇದಿಯಲ್ವ.. ಬುರ್ಖಾ ಧರಿಸಿ ಬಾ – ವಿದ್ಯಾರ್ಥಿಗಳಿಗೆ ಬಸ್‌ ಹತ್ತಲು ಚಾಲಕ ನಿರಾಕರಣೆ

  ಕಲಬುರಗಿ, ಜುಲೈ 26: ತಮ್ಮೂರಿಗೆ ಹೊರಟಿದ್ದ ಹಿಜಬ್‌ಧಾರಿ ವಿದ್ಯಾರ್ಥಿನಿಯರಿಗೆ, ಬುರ್ಖಾ ಧರಿಸಿ ಬರುವಂತೆ ಹೇಳಿ ಬಸ್‌ ಹತ್ತಲು ಚಾಲಕ ಅವಕಾಶ ನೀಡದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

  ಕಮಲಾಪುರ ತಾಲೂಕಿನಲ್ಲಿ ಘಟನೆ ನಡೆದಿದ್ದು, ಬುರ್ಖಾ ಧರಿಸಿಯೇ ಬನ್ನಿ ಎಂದು ವಿದ್ಯಾರ್ಥಿನಿಯರನ್ನು ಬಸ್‌ನಿಂದ ಚಾಲಕ ಕೆಳಗಿಳಿಸಿರುವ ಘಟನೆ ನಡೆದಿದೆ. ತಮ್ಮೂರಿಗೆ ಹೋಗಲು ವಿದ್ಯಾರ್ಥಿನಿಯರು ಬಸವಕಲ್ಯಾಣಕ್ಕೆ ಹೋಗುವ ಬಸ್ ಹತ್ತಿದ್ದರು. ವರನಾಳ ಗ್ರಾಮಕ್ಕೆ ಹೋಗುವ ವಿದ್ಯಾರ್ಥಿಗಳನ್ನ ಹತ್ತಿಸಿಕೊಂಡಿರಿ. ನಾವು ಓಕಳಿ ವರೆಗೆ ಬರ್ತೀವಿ ಎಂದ ವಿದ್ಯಾರ್ಥಿನಿಯರು ಚಾಲಕನ ಬಳಿ ಪ್ರಸ್ತಾಪಿಸಿದ್ದಾರೆ.

  ಈ ವೇಳೆ ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ‘ನೀನು ಮುಸ್ಲಿಂ ಇದಿಯಲ್ವ.. ಬುರ್ಖಾ ಧರಿಸಿ ಬಾ.. ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ’ ಎಂದಿದ್ದಾನೆ ಚಾಲಕ. ಏಕವಚನದಲ್ಲಿ ಬೈಯ್ದು ನಮ್ಮನ್ನ ಚಾಲಕ ಕೆಳಗಿಳಿಸಿದ್ದಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ವಿಚಾರವಾಗಿ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ.

  Share Information
  Advertisement
  Click to comment

  You must be logged in to post a comment Login

  Leave a Reply