Connect with us

LATEST NEWS

ಶಾಸಕ ತನ್ವೀರ್ ಸೇಠ್ ಗೆ ಎಚ್ಚರಿಕೆ ನೀಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ

Share Information

ಉಡುಪಿ ಜುಲೈ 26: ಡಿಜೆ ಹಳ್ಳಿ ಕೆಜೆ ಹಳ್ಳಿ ಹುಬ್ಬಳ್ಳಿ ಶಿವಮೊಗ್ಗ ಪ್ರಕರಣದ ಆರೋಪಿಗಳು ಅಮಾಯಕರು ಎಂಬ ಶಾಸಕ ತನ್ವೀರ್ ಸೇಠ್ ಪತ್ರ ವಿಚಾರಕ್ಕೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದು, ತನ್ವಿರ್ ಸೇಠ್ ಅವರನ್ನು ಜಿಹಾದಿ ಸಂಘಟನೆಯ ಒಬ್ಬ ಸದಸ್ಯ ಎಂದು ನಾವು ಭಾವಿಸಬೇಕಾಗುತ್ತದೆ ಎಂದಿದ್ದಾರೆ.


ಉಡುಪಿಯಲ್ಲಿ ಮಾತನಾಡಿದ ಅವರು ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣ ಇಡೀ ರಾಜ್ಯ ಮಾತ್ರ ಅಲ್ಲ ಇಡೀ ದೇಶದಲ್ಲಿ ಗಂಭೀರವಾದ ಘಟನೆಯಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ರಾಜ್ಯದಲ್ಲಿ ಕೊಲೆ ಹಲ್ಲೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ. ಜೈನ ಮುನಿ, ವೇಣುಗೋಪಾಲ್ ಹತ್ಯೆ ಪ್ರಕರಣಗಳು ನಡೆದಿದೆ. ಗೊಂದಲ ಸೃಷ್ಟಿಸಿ ದಂಧೆಗಳಿಗೆ ಸಹಕಾರ ಕೊಡುವುದು ಕಾಂಗ್ರೆಸ್‌ ಮನಸ್ಥಿತಿಯಾಗಿದೆ ಎಂದರು.

ರಾಷ್ಟ್ರ -ದೇಶದ ಬಗ್ಗೆ ಚಿಂತನೆ ಮಾಡುವ ಬಜರಂಗದಳದವರು ಅಮಾಯಕರು, ಆದರೆ ಬಜರಂಗದಳದ ಮೇಲೆ ಸುಳ್ಳು ಕೇಸು ಆರೋಪ ಮಾಡಿ ಗಡಿಪಾರು ಮಾಡುವ ಪ್ರಯತ್ನ ನಡೆದಿದೆ.
ಗೃಹ ಸಚಿವರಿಗೆ ಪತ್ರ ಬರೆಯುವ ಮೂಲಕ ತನ್ವೀರ್ ಸೇಠ್ ಜಿಹಾದಿಗಳನ್ನು ತಮ್ಮ ಸಮುದಾಯವನ್ನು ಬೆಂಬಲಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ, ಶಾಸಕ ತನ್ವೀರ್ ಸೇಠ್ ಅವರೇ ನಿಮಗೆ ಎಚ್ಚರಿಕೆ ಮಾತನ್ನು ಹೇಳುತ್ತಿದ್ದೇವೆ, ನೀವು ಜಿಹಾದಿ ಸಂಘಟನೆಯ ಒಬ್ಬ ಸದಸ್ಯ ಎಂದು ನಾವು ಭಾವಿಸಬೇಕಾಗುತ್ತದೆ. ಜಿಹಾದಿ ಗಳಿಗೆ ಬೆಂಬಲ ನೀಡಿದರೆ ನಿಮಗೆ ಧಿಕ್ಕಾರ ಹಾಕುವ ಬಹಿಷ್ಕರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


Share Information
Advertisement
Click to comment

You must be logged in to post a comment Login

Leave a Reply