DAKSHINA KANNADA
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ, ರಾಷ್ಟ್ರೀಯ ತನಿಖಾ ದಳ ಆಗಮನ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ, ರಾಷ್ಟ್ರೀಯ ತನಿಖಾ ದಳ ಆಗಮನ
ಮಂಗಳೂರು,ಜನವರಿ 20: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಅನುಮಾನಾಸ್ಪದ ಬ್ಯಾಗ್ ನಲ್ಲಿರುವುದು ಬಾಂಬ್ ಎಂದು ಖಚಿತಪಟ್ಟಿದೆ.
ಐಇಡಿ ಬಾಂಬ್ ಇದಾಗಿದ್ದು, ಉಗ್ರರು ಈ ಬಾಂಬ್ ಅನ್ನು ಮಂಗಳೂರು ವಿಮಾನ ನಿಲ್ದಾಣದ ಪೋಲೀಸ್ ತಪಾಸಣಾ ಕೌಂಟರ್ ಬಳಿ ಅಳವಡಿಸಿ ಹೋಗಿದ್ದರು.
ಆದರೆ ಬಾಂಬ್ ನ ಕನೆಕ್ಷನ್ ನಲ್ಲಿ ವೆತ್ಯಾಸವಾದ ಕಾರಣ ಬಾಂಬ್ ಸಿಡಿಯದೆ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಇಂದು ಬೆಳಿಗ್ಗೆ ಸುಮಾರು 9 ಗಂಟೆ ಅಸುಪಾಸಿನಲ್ಲಿ ಈ ಘಟನೆ ನಡೆದಿದ್ದು, ಆಟೋದಲ್ಲಿ ಬಂದ ವ್ಯಕ್ತಿಗಳು ಈ ಬ್ಯಾಗನ್ನು ತಪಾಸಣಾ ಕೌಂಟರ್ ಬಳಿ ಇಟ್ಟು ಪರಾರಿಯಾಗಿದ್ದಾರೆ.
ಈ ಬ್ಯಾಗ್ ನಲ್ಲಿ IED ( Improvised Explosive Device ) ಜೊತೆಗೆ ಟೈಮರ್ ಕೂಡಾ ಪತ್ತೆಯಾಗಿದೆ.
ವಿಮಾನ ನಿಲ್ದಾಣದಲ್ಲಿರುವ ಶ್ವಾನ ಈ ಬ್ಯಾಗನ್ನು ಮೊದಲು ಪತ್ತೆ ಮಾಡಿದ್ದು, ತಕ್ಷಣ ವಿಮಾನ ನಿಲ್ದಾಣದಾದ್ಯಂತ ಹೈ ಎಲರ್ಟ್ ಘೋಷಿಸಲಾಗಿತ್ತು.
ಬ್ಯಾಗನ್ನು ವಶಕ್ಕೆ ಪಡೆದುಕೊಂಡ ಸಿಐಎಫ್ಐ ಅಧಿಕಾರಿಗಳು ಬಳಿಕ ಮಂಗಳೂರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಂಬ್ ಇದ್ದ ಬ್ಯಾಗನ್ನು ಬಾಂಬ್ ನಿಷ್ಕ್ರೀಯಗೊಳಿಸುವ ಯಂತ್ರಕ್ಕೆ ಹಾಕಿ ಅದನ್ನು ನಿರ್ಜೀವಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಈ ಸಂಬಂಧ ಹಿರಿಯ ಪೋಲೀಸ್ ಅಧಿಕಾರಿಗಳು, ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.