Connect with us

    DAKSHINA KANNADA

    ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ

    ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ

    ಮಂಗಳೂರು, ಜನವರಿ 20: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಒಂದು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

    ವಿಮಾನ ನಿಲ್ದಾಣದ ಪೋಲೀಸ್ ಚೆಕ್ ಪೋಸ್ಟ್ ಬಳಿಯಿದ್ದ ಕುರ್ಚಿಯೊಂದರ ಕೆಳಗೆ ಈ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ ನಲ್ಲಿ ಸ್ಟೋಟಕವಿರುವ ಶಂಕೆ ವ್ಯಕ್ತಪಡಿಸಲಾಗಿದೆ.

    ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ, ಹಿರಿಯ ಪೋಲೀಸ್ ಅಧಿಕಾರಿಗಳು ಧಾವಿಸಿದ್ದು, ಬ್ಯಾಗ್ ನಲ್ಲಿರುವ ವಸ್ತುವನ್ನು ಪರಿಶೀಲನೆ ನಡೆಸಲಿದ್ದಾರೆ.

    ವಿಮಾನ ನಿಲ್ದಾಣದ ಹೊರಗಡೆ ಕೇಂದ್ರೀಯ ಮೀಸಲು ಪಡೆಯ ಜವಾನರು ತಪಾಸಣೆ ನಡೆಸುವಂತಹ ಚೆಕ್ ಪೋಸ್ಟ್ ಬಳಿ ಈ ಬ್ಯಾಗ್ ಪತ್ತೆಯಾಗಿದೆ.

    ಪೋಲೀಸ್ ಶ್ವಾನದ ಕಣ್ಣಿಗೆ ಈ ಬ್ಯಾಗ್ ಬಿದ್ದಿದ್ದು, ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಯಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply