DAKSHINA KANNADA
ಮಂಗಳೂರು : ಇಸ್ರೇಲ್‌ನಲ್ಲಿ ಕೆಲಸ ಕೊಡಿಸುವ ಆಮೀಷ, ನಕಲಿ ಏಜನ್ಸಿಯಿಂದ 130 ಜನರಿಗೆ ಪಂಗನಾಮ..!
ಇಸ್ರೇಲ್‌ನಲ್ಲಿ ಉದ್ಯೋಗ ನೀಡುವ ಆಮೀಷವೊಡ್ಡಿ ಕೇರಳ ಮೂಲದ ಏಜೆನ್ಸಿಯೊಂದು ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ 100 ಕ್ಕೂ ಅಧಿಕ ಮಂದಿಗೆ ವಂಚಿಸಿರುವ (Fake job Scam) ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರು: ಇಸ್ರೇಲ್‌ನಲ್ಲಿ ಉದ್ಯೋಗ ನೀಡುವ ಆಮೀಷವೊಡ್ಡಿ ಕೇರಳ ಮೂಲದ ಏಜೆನ್ಸಿಯೊಂದು ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ 100 ಕ್ಕೂ ಅಧಿಕ ಮಂದಿಗೆ ವಂಚಿಸಿರುವ (Fake job Scam) ಪ್ರಕರಣ ಬೆಳಕಿಗೆ ಬಂದಿದೆ.
ಇಸ್ರೇಲ್‌ನ ಕಂಪೆನಿಯೊಂದ ಹೆಸರು ಬಳಸಿ ಈ ವಂಚನೆ ಮಾಡಲಾಗಿದೆ. ಇಸ್ರೇಲ್ ನಲ್ಲಿ ಉದ್ಯೋಗ ನೀಡುವುದಾಗಿ ಪಾಸ್‌ಪೋರ್ಟ್ ಹಾಗೂ ಹಣ ಪಡೆದ ಕೇರಳದ ಏಜೆನ್ಸಿಯೊಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 130 ಮಂದಿಯನ್ನು ಲಕ್ಷಾಂತರ ರೂಪಾಯಿಗಳನ್ನು ದೋಚಿ ಪಂಗನಾಮ ಹಾಕಿದ್ದಾರೆ.
ಕರಾವಳಿಯ ಉದ್ಯೋಗಾಕಾಂಕ್ಷಿಗಳು ಇಸ್ರೇಲ್‌ನಲ್ಲಿ ಉದ್ಯೋಗ ಪಡೆಯಲು ಮಂಗಳೂರಿನ ಕನ್ಸಲ್ಟೆನ್ಸಿಯವರಿಗೆ ಪಾಸ್‌ಪೋರ್ಟ್ ನೀಡಿದ್ದು ಏಜನ್ಸಿ ಕೇರಳದ ಏಜೆನ್ಸಿಗೆ ನೀಡಿತ್ತು. ಮಂಗಳೂರಿನ ಕನ್ಸಲ್ಟೆನ್ಸಿಯ ರೋಹಿತ್ ಎಂಬವರು ಇದರ ನೇತ್ರತ್ವ ವಹಿಸಿದ್ದರು. ತಮ್ಮ ಬಳಿ 130 ಮಂದಿ ತಂದುಕೊಟ್ಟಿದ್ದ ಪಾಸ್‌ಪೋರ್ಟ್‌ನ್ನು ಕೇರಳದ ಸ್ಪೇಸ್ ಇಂಟರ್‌ನ್ಯಾಶನಲ್ ಎಂಬ ಏಜೆನ್ಸಿಯವರಿಗೆ ನೀಡಿದ್ದರು. ಪಾಸ್‌ಪೋರ್ಟ್ ನೀಡಿದ ಸುಮಾರು 20 ದಿನಗಳ ನಂತರ ಇಸ್ರೇಲ್‌ನ ಕೊಹೇನ್ ಎಂಪ್ಲಾಯ್‌ಮೆಂಟ್ ಗ್ರೂಪ್ ಕಂಪನಿ ಎಂಬ ಹೆಸರಿನಿಂದ ಆಫರ್ ಲೆಟರ್ ಬಂದಿತ್ತು. ಆ ಆಫರ್ ಲೆಟರ್‌ನ ಬಗ್ಗೆ ಇಸ್ರೇಲ್‌ನಲ್ಲಿರುವ ಅವರ ಗೆಳೆಯನಿಗೆ ತಿಳಿಸಿದ್ದರು. ಆದರೆ, ಅವರು ಅಲ್ಲಿ ಪರಿಶೀಲನೆ ಮಾಡುವಾಗ ಆ ಹೆಸರಿನ ಕಂಪನಿ ಅಸ್ತಿತ್ವದಲ್ಲಿ ಇರಲೇ ಇಲ್ಲ. ಆಗಲೇ ಗೊತ್ತಾದದ್ದು ಇವರು ಮೋಸ ಹೋಗಿದ್ದಾರೆಂದು ಹೀಗಾಗಿ, ಸ್ಪೇಸ್ ಇಂಟರ್‌ನ್ಯಾಶನಲ್‌ನವರ ಬಳಿ ಪಾಸ್‌ಪೋರ್ಟ್‌ಗಳನ್ನು ವಾಪಸ್ ನೀಡುವಂತೆ ಹೇಳಿದರು. ಆದರೆ, ಸ್ಪೇಸ್ ಇಂಟರ್‌ನ್ಯಾಶನಲ್‌ನವರು ಪಾಸ್‌ಪೋರ್ಟ್‌ಗಳನ್ನು ನೀಡಲು ನಿರಾಕರಿಸುತ್ತಿದ್ದಾರಂತೆ. ಆಫರ್ ಲೆಟರ್ ಪಡೆದು 60,000 ರೂ. ನೀಡಬೇಕು ಅಥವಾ ಪಾಸ್‌ಪೋರ್ಟ್ ವಾಪಸ್ ಬೇಕಾದರೆ ಅದಕ್ಕೂ 60,000 ರೂ. ನೀಡಬೇಕು ಎಂದು ಬೆದರಿಸುತ್ತಿದ್ದಾರಂತೆ. ಹೀಗಾಗಿ ಸಂತ್ರಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.