Connect with us

    LATEST NEWS

    ಕೆಂಜಾರು ಬಯಲು ಪ್ರದೇಶದಲ್ಲಿ ಬಾಂಬ್ ಸ್ಪೋಟಗೊಳಿಸಿ ಯಶಸ್ವಿಯಾಗಿ ಬಾಂಬ್ ನಿಷ್ಕ್ರೀಯ

    ಕೆಂಜಾರು ಬಯಲು ಪ್ರದೇಶದಲ್ಲಿ ಬಾಂಬ್ ಸ್ಪೋಟಗೊಳಿಸಿ ಯಶಸ್ವಿಯಾಗಿ ಬಾಂಬ್ ನಿಷ್ಕ್ರೀಯ

    ಮಂಗಳೂರು ಜನವರಿ 20: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಅನುಮಾನಸ್ಪದವಾಗಿ ಪತ್ತೆಯಾಗಿದ್ದ ಬ್ಯಾಗ್ ನಲ್ಲಿದ್ದ ಸ್ಪೋಟಕವನ್ನು ವಿಮಾನ ನಿಲ್ದಾಣದ ಹೊರಗಡೆ ಇರುವ ಕೆಂಜಾರ್ ನ ವಿಶಾಲ ಗದ್ದೆಯಲ್ಲಿ ಸ್ಪೋಟಗೊಳಿಸಿ ನಿಷ್ಕ್ರೀಯಗೊಳಿಸಿದ್ದಾರೆ.

    ಸೋಮವಾರ ಬೆಳಗ್ಗೆ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಭದ್ರತಾ ತಪಾಸಣಾ ಗೇಟ್ ಬಳಿ ಜೀವಂತ ಬಾಂಬ್‌ ಇರುವ ಬ್ಯಾಗ್ ಪತ್ತೆಯಾಗಿತ್ತು. ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಬಾಂಬ್‌ ನಿಷ್ಕ್ರಿಯಗೊಳಿಸಲು ಮುಂದಾದರು.

    ನಾಣ್ಯ ಸಂಗ್ರಹಕ್ಕೆ ಬಳಸುವ ಲೋಹದ ಡಬ್ಬಿಯಲ್ಲಿ ಬಾಂಬ್‌ ಇಡಲಾಗಿತ್ತು. ಸ್ಫೋಟಕ್ಕೆ ಬಳಸುವ ರಾಸಾಯನಿಕ ಪುಡಿ, ಲೋಹದ ತಂತಿ, ಲೋಹದ ತುಣುಕುಗಳು, ಟೈಮರ್ ಬಳಸಿ ಬಾಂಬ್ ತಯಾರಿಸಲಾಗಿತ್ತು. ಬಳಸಿದ್ದ ಟೈಮರ್ ಸ್ಥಗಿತಗೊಂಡಿತ್ತು ಎಂದು ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗಳು ಸ್ಥಳದಲ್ಲೇ ಮಾಹಿತಿ ನೀಡಿದ್ದರು.

    ಬಜ್ಪೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸುಧಾರಿತ ಬಾಂಬ್‌ ಇರುವ ಬ್ಯಾಗ್‌ ಅನ್ನು ಭದ್ರತಾ ಸಿಬ್ಬಂದಿಗಳು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಸ್ಫೋಟಿಸಿದ್ದಾರೆ.

    ಇನ್ನು ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರೀಯಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಅವರು ಪತ್ತೆಯಾದ ಬ್ಯಾಗ್ ನಲ್ಲಿ ಇದ್ದ ವಸ್ತು ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಅದು ಸ್ಪೋಟಕ ಎಂದು ಧೃಡಪಟ್ಟಿದೆ. ಬೆಳಗ್ಗೆ ವ್ಯಕ್ತಿಯೊಬ್ಬ ಅನುಮಾನಾಸ್ಪದ ಬ್ಯಾಗೇಜ್ ಒಂದನ್ನು ನಿಲ್ದಾಣದ ಆವರಣದೊಳಗೆ ತಂದಿದ್ದು ಅದರೊಳಗೆ ಸ್ಪೋಟಕ ಇತ್ತು. ವಿಮಾನ ನಿಲ್ದಾಣದ ಸುರಕ್ಷತೆ ಜವಾಬ್ದಾರಿ ಹೊತ್ತ ಸಿಐಎಸ್ ಎಫ್ ಸಿಬ್ಬಂದಿ ಅದನ್ನು ಗುರುತಿಸಿ ಅದನ್ನು ನಿಯಮ ಪ್ರಕಾರ ಶೋಧನೆಗೆ ಒಳಪಡಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಬಳಿಕ ಪ್ರಯಾಣಿಕರ ಸುರಕ್ಷತೆಗಾಗಿ ಸಂಬಂಧಿತ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಿ ಬಾಂಬ್ ಪತ್ತೆ ದಳವನ್ನು ಕರೆಸಲಾಯಿತು. ಸಿ ಐಎಸ್ ಎಫ್ ದೂರಿನ ಪ್ರಕಾರ ಬಜ್ಪೆ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ಮಾಹಿತಿ ಕಲೆ ಹಾಕಲಾಗಿದೆ.

    ಈ ಪ್ರಕರಣದ ಬಗ್ಗೆ ತನಿಖೆಗೆ ತಜ್ಞರನ್ನೊಳಗೊಂಡ ಮೂರು ತಂಡಗಳನ್ನು ರಚಿಸಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ನಗರಾದ್ಯಂತ ಪೊಲಿಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply