LATEST NEWS
ಕ್ರೀಡಾಪಟುಗಳನ್ನು ಹೊರಗೆ ಕಳುಹಿಸಿ ನಾಯಿ ಜೊತೆ ವಾಕಿಂಗ್ ಮಾಡುತ್ತಿದ್ದ ಐಎಎಸ್ ದಂಪತಿಗಳನ್ನು ಲಡಾಕ್ ಅರುಣಾಚಲ ವರ್ಗಾವಣೆ….!!

ನವದೆಹಲಿ:ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಕ್ರೀಡಾಚಟುವಟಿಕೆಗಳಿಗೆ ಮೀಸಲಾಗಿದ್ದ ಕ್ರೀಡಾಂಗಣವನ್ನು ತಮ್ಮ ನಾಯಿ ಜೊತೆ ವಾಕಿಂಗ್ ಮಾಡಲು ಐಎಎಸ್ ಅಧಿಕಾರಿ ಅವಧಿಗೆ ಮುನ್ನವೇ ಕ್ರೀಡಾಪಟುಗಳನ್ನು ಹೊರಗೆ ಕಳುಹಿಸಿತ್ತಿದ್ದ ಪ್ರಕರಣ ದೆಹಲಿಯಲ್ಲಿ ನಡೆದಿದ್ದು, ವರದಿಯಾಗುತ್ತಿದ್ದಂತೆ ಐಎಎಸ್ ದಂಪತಿಗಳನ್ನು ವರ್ಗಾವಣೆ ಮಾಡಲಾಗಿದೆ.
ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ ಹಾಗೂ ಅವರ ಪತ್ನಿ, ಐಎಎಸ್ ಅಧಿಕಾರಿ ರಿಂಕು ದುಗ್ಗಾ ದೆಹಲಿಯ ತ್ಯಾಗರಾಜ್ ಕ್ರೀಡಾಂಗಣವನ್ನು ಅವಧಿಗೂ ಮೊದಲೇ ಮುಚ್ಚಿಸಿದ್ದರು. ಸಂಜೆ 6 ಅಥವಾ 7 ಗಂಟೆ ಒಳಗೆಯೇ ಕ್ರೀಡಾಂಗಣವನ್ನು ಮುಚ್ಚಿಸಿ ಅಥ್ಲೀಟ್‌ಗಳು, ತರಬೇತುದಾರರನ್ನು ಕ್ರೀಡಾಂಗಣದಿಂದ ಹೊರಹೋಗುವಂತೆ ಸೂಚಿಸಲಾಗಿತ್ತು. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಧಿಕಾರ ದುರ್ಬಳಕೆ ಬಗ್ಗೆ ವರದಿ ಪಡೆದುಕೊಂಡ ಗೃಹ ಇಲಾಖೆ ಪತಿಯನ್ನು ಲಡಾಖ್‌ಗೆ, ಪತ್ನಿ ಅರುಣಾಚಲಕ್ಕೆ ವರ್ಗಾವಣೆ ಮಾಡಿದೆ.
