Connect with us

    LATEST NEWS

    ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬಂಗಾಳಿ ನಟಿ ಬಿದಿಶಾ ….!!

    ಬಂಗಾಳ ಮೇ 26: ಬಂಗಾಳಿ ನಟಿ ರೂಪದರ್ಶಿ ಬಿದಿಶಾ ಡಿ ಮಜುಂದಾರ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಪ್ಲಾಟ್ ನಲ್ಲಿ ಪತ್ತೆಯಾಗಿದೆ.


    21 ವರ್ಷದ ಬಿದಿಶಾ ಕಳೆದ ನಾಲ್ಕು ತಿಂಗಳಿನಿಂದ ಕೋಲ್ಕತ್ತಾದ ನಾಗರ್‌ಬಜಾರ್‌ನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿಯಲು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಏತನ್ಮಧ್ಯೆ, ಬಿದಿಶಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್‌ಜಿ ಕಾರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೂಲದ ಪ್ರಕಾರ, ಪೊಲೀಸರು ಬಿದಿಶಾ ಅವರ ಫ್ಲಾಟ್ ನಿಂದ ಡೆತ್ ನೋಟ್ ಸಹ ವಶಪಡಿಸಿಕೊಂಡಿದ್ದಾರೆ. ಮೃತ ಮಾಡೆಲ್ ಗೆ ಅನುಭಾಬ್ ಬೇರಾ ಎಂಬ ಗೆಳೆಯನಿದ್ದ. ಆತನ ಜೊತೆಗಿನ ಸಂಬಂಧದಿಂದಾಗಿ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಆಕೆಯ ಸ್ನೇಹಿತರು ಹೇಳಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply