LATEST NEWS
ನಿವೃತ್ತಿ ಎಂದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಪಿವಿ ಸಿಂಧು….!!
ನವದೆಹಲಿ : ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ನಿವೃತ್ತಿ ಸಂಬಂಧಿಸಿದ ಪೋಸ್ಟ್ ಈಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಅದು ಬ್ಯಾಡ್ಮಿಂಟನ್ ಗೆ ಸಂಬಂಧಿಸಿ ನಿವೃತ್ತಿ ಅಲ್ಲ.. ಅದು ಕೊರೊನಾ ವೈರಸ್ ಗೆ ಸಂಬಂಧಿಸಿದ ನಿವೃತ್ತಿ.
ಕೊರೊನಾ ವೈರಸ್ ನಿಂದಾಗಿ ಈಗಾಗಲೇ ಕ್ರೀಡಾ ಚಟುವಟಿಕೆಗಳು ಸಂಪೂರ್ಣ ಸ್ತಬ್ದವಾಗಿದೆ. ಈ ನಡುವೆ ಕ್ರಿಕೇಟ್ ಸೇರಿದಂತೆ ಹಲವು ಕ್ರೀಡೆಗಳು ಪ್ರೇಕ್ಷಕರಿಲ್ಲದೆ ನಡೆಯುತ್ತಿದ್ದು, ಸಂಪೂರ್ಣ ಸ್ವಚ್ಚತೆ ಸೇರಿದಂತೆ ವಿವಿಧ ಕಟ್ಟುನಿಟ್ಟಿಗಳಿಂದ ಕ್ರೀಡಾಪಟುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ನಡುವೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಒಂದು ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳಿಗೆ ಒಂದು ಕ್ಷಣ ಹಾರ್ಟ್ ಅಟ್ಯಾಕ್ ತರಿಸಿದೆ. ನನ್ನ ನಿವೃತ್ತಿ ಎಂದು ಪೋಸ್ಟ್ ಮಾಡಿರುವ ಪಿವಿ ಸಿಂಧು ಅದರಲ್ಲಿ
“ಹೊಸದಾದ ಭಾವನೆಗಳೊಂದಿಗೆ ಬರಲು ಯೋಚಿಸುತ್ತಿದ್ದೇನೆ. ಸಾಕಷ್ಟು ದಿನಗಳಿಂದ ಇದರಿಂದ ತುಂಬಾ ಹೆಣಗಾಡುತ್ತಿದ್ದೇನೆ. ಇದು ನನ್ನಲ್ಲಿ ತಪ್ಪು ಭಾವನೆಗಳನ್ನು ಮೂಡಿಸುತ್ತಿದೆ. ಈ ಕಾರಣದಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ,” ಎಂದು ತಮ್ಮ ಹೇಳಿಕೆಯಲ್ಲಿ 25ರ ಪ್ರಾಯದ ಆಟಗಾರ್ತಿ ತಿಳಿಸಿದ್ದಾರೆ.
“ಸದ್ಯ ಕೋವಿಡ್-19 ಸಾಂಕ್ರಾಮಿಕ ಸೋಂಕು ನನಗೆ ತುಂಬಾ ಆತಂಕವನ್ನು ಉಂಟುಮಾಡಿದೆ. ಕಠಿಣ ಪರಿಶ್ರಮ ಪಟ್ಟು ಬಲಿಷ್ಠ ಎದುರಾಳಿಯನ್ನು ಸೋಲಿಸಬೇಕು. ಈ ಹಿಂದೆಯೂ ಇದನ್ನೇ ಮಾಡಿದ್ದೆ, ಆದರೆ ಇದೀಗ ಮಾರಣಾಂತಿಂಕ ವೈರಸ್‌ನಿಂದ ನನ್ನನ್ನು ಮಾನಸಿಕವಾಗಿ ಕುಗ್ಗುತ್ತಿದ್ದೇನೆ. ಇಡೀ ಜಗತ್ತು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ,” ಎಂದು ಸಿಂಧು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಜಗತ್ತಿನಲ್ಲಿ ಪ್ರಸ್ತುತ ಇರುವ ಸನ್ನಿವೇಶ ಹಾಗೂ ಋಣಾತ್ಮಕ ಭಾವನೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದ ಸಿಂಧು, ಇಡೀ ಪ್ರಪಂಚಕ್ಕೆ ಪ್ರಸ್ತುತ ಇರುವ ಸನ್ನಿವೇಶ ಅರ್ಥವಾಗಲು ಈ ರೀತಿ ಬರೆದಿದ್ದಾರೆಂದು ಅವರು ಹೇಳಿಕೆಯನ್ನು ಸಂಪೂರ್ಣವಾಗಿ ಓದಿದರೆ ಅರ್ಥವಾಗುತ್ತದೆ.
“ಡೆನ್ಮಾರ್ಕ್ ಓಪನ್ ಬಳಿಕ ನಾನು ನಿವೃತ್ತಿಯನ್ನು ಪಡೆಯುತ್ತಿಲ್ಲ. ಆದರೆ, ಮುಂದಿನ ಏಷ್ಯಾ ಕಪ್‌ಗೆ ಬಲಿಷ್ಠವಾಗಿ ಅಂಗಣಕ್ಕೆ ಮರಳುತ್ತೇನೆ ಹಾಗೂ ಇದಕ್ಕಾಗಿ ಇನ್ನಷ್ಟು ಕಠಿಣ ಪರಿಶ್ರಮ ಪಡುತ್ತೇನೆ. ಕೊರೊನಾ ವೈರಸ್ ಕುರಿತು ಇರುವ ಅಸಡ್ಡೆ, ಋಣಾತ್ಮಕ ಅಂಶಗಳು, ಕೆಟ್ಟ ಆಲೋಚನೆಗಳಿಂದ ನಿವೃತ್ತಿ ಪಡೆಯುತ್ತೇನೆ ಹಾಗೂ ಮುಂದಿನ ಟೂರ್ನಿಗಳಿಗೆ ಶಕ್ತಿಯುತವಾಗಿ ಮರಳುತ್ತೇನೆ,” ಎಂದು ಪಿ.ವಿ ಸಿಂಧು ಹೇಳಿದ್ದಾರೆ.