Connect with us

LATEST NEWS

ಮಂಗಳೂರಿನ ಉಳ್ಳಾಲ ಈಗ ಪಾಕಿಸ್ತಾನ ಇದ್ದಂತೆ – ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು ನವೆಂಬರ್ 2: ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಇದ್ದಂತೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಕೋಣಾಜೆಯಲ್ಲಿ ಕಿನ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮಂಗಳೂರಿನ ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನವನ್ನು ನೋಡಿದ ಹಾಗೆ ಆಗುತ್ತಿದ್ದು, ಉಳ್ಳಾಲ ಪಾಕಿಸ್ತಾನವೇ ಅಲ್ವಾ..? ಅದು ಬೇರೆ ಆಗೋಕೆ ಸಾಧ್ಯ ಇದೆಯಾ..? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಡೆ ಪಾಕಿಸ್ತಾನ ನಿರ್ಮಾಣ ಆಗಿದೆ ಎಂದು ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಮನೆಯಲ್ಲಿ ಒಂದೇ ಮಗುವಿದ್ದಾಗ ಆ ಮಗುವಿಗೆ ಅಣ್ಣ, ತಮ್ಮ, ಅಕ್ಕ, ತಂಗಿನೂ ಯಾರೂ ಇರಲ್ಲ ಆಗ ಮಗು ಸ್ವಾರ್ಥಿಯಾಗುತ್ತದೆ, ಆದರೆ ಮನೆಯಲ್ಲಿ ಮಕ್ಕಳು ಹೆಚ್ಚಿದಷ್ಟು ಆನಂದ, ಖುಷಿ ಹೆಚ್ಚಾಗಿರುತ್ತದೆ. ಇದೀಗ ಹಿಂದೂ ಸಮಾಜದಲ್ಲಿ ಸಂಖ್ಯೆ ಕಡಿಮೆ ಇದೆ. ಹೀಗೆ ಆದರೆ ನಮ್ಮ ದೇವಸ್ಥಾನವನ್ನು ಉಳಿಸುವವರು ಯಾರು..? ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವವರು ಯಾರು..? ಎಂದು ಪ್ರಶ್ನಿಸಿದ್ದಾರೆ. ದೇಶದ ವಿಭಜನೆ ಸಂದರ್ಭ ನಮ್ಮವರ ಸಂಖ್ಯೆ ಕಡಿಮೆ ಇತ್ತು ಅವರ ಸಂಖ್ಯೆ ಹೆಚ್ಚಾಗಿತ್ತು, ಹೀಗಾಗಿ ಪಾಕಿಸ್ತಾನ, ಬಾಂಗ್ಲಾದೇಶ ನಿರ್ಮಾಣವಾಯಿತು ಎಂದು ಹೇಳಿದ ಅವರು ಇದೇ ರೀತಿ ಜಿಲ್ಲೆಯಲ್ಲೂ ಅನೇಕ ಕಡೆಗಳಲ್ಲಿ ಪಾಕಿಸ್ತಾನ ನಿರ್ಮಾಣವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Facebook Comments

comments