DAKSHINA KANNADA
ಹಿಂದುತ್ವಕ್ಕೆ ಬುದ್ಧಿ ಕಲಿಸ್ತೇನೆ ಅಂತ ಹೇಳಿಲ್ಲ: ಅಶೋಕ್ ಕುಮಾರ್ ರೈ
ಪುತ್ತೂರು, ಮೇ 03: ಅಶೋಕ್ ರೈ ಬೆಂಗಳೂರು ನಿವಾಸಕ್ಕೆ ಐಟಿ ದಾಳಿ ವಿಚಾರವಾಗಿ ಪುತ್ತೂರಿನಲ್ಲಿ ಸುದ್ದಿಗಾರರಿಗೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಯವರು ಬಿಜೆಪಿಯವ್ರು 5 ವರ್ಷದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ, ನಾವು ಬಿಜೆಪಿಯವ್ರ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡುವಾಗ ಅವ್ರು ನಾವು ಮಾಡಿರುವ ಭಾಷಣವನ್ನ ತಿರುಚುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ನಾನು ಬಿಜೆಪಿ ಪಕ್ಷಕ್ಕೆ ಆಗಲಿ, ಕಾರ್ಯಕರ್ತರಿಗೆ ಆಗಲಿ ಅಥವಾ ಹಿಂದುತ್ವಕ್ಕೆ ಬುದ್ಧಿ ಕಲಿಸ್ತೇನೆ ಅಂತ ಹೇಳಿಲ್ಲ. ನಾನೂ ಕೂಡ ಹಿಂದು, ಹಿಂದುತ್ವವನ್ನ ಒಪ್ಪಿಕೊಂಡವ, ನಾನು ನನ್ನ ಧರ್ಮವನ್ನ ಪ್ರೀತಿಸ್ತೇನೆ, ಇನ್ನೊಂದು ಧರ್ಮವನ್ನ ಗೌರವಿಸುತ್ತೇನೆ. ಎಲ್ಲಾ ಧರ್ಮವನ್ನ ಸಮಾನವಾಗಿ ನೋಡುವವ ನಾನು, ಹಾಗಾಗಿ ಬೇರೆ ಯಾವುದೇ ಆಯುಧಗಳಲ್ಲಿದೆ ಬಿಜೆಪಿ ಸೋಲನ್ನೊಪ್ಪಿಕೊಂಡಿದೆ. ಈ ಮೂಲಕ ಐಟಿ ದಾಳಿ ಮಾಡಿಸಿದ್ದಾರೆ.
ಆದ್ರೆ ಐಟಿ ರೈಡ್ ಆದ್ರೂ ನನ್ನಲ್ಲಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ, ಕಾರಣ ನಾನು ವರ್ಷಕ್ಕೆ ಎಷ್ಟೋ ಕೋಟಿ ತೆರಿಗೆ ಕಟ್ಟುತ್ತಿದ್ದೇನೆ.
ಮೈಸೂರಿನಲ್ಲಿರುವ ಅಶೋಕ್ ರೈ ಸಹೋದರನ ಮನೆ ಮೇಲೆ ಐಟಿ ದಾಳಿ ವಿಚಾರ
ನನ್ನ ಅಣ್ಣನ ಮನೆಗೆ ಐಟಿ ದಾಳಿ ಆಗಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನನ್ನ ಸಹೋದರ ಒಳ್ಳೆಯ ಬಿಝಿನೆಸ್ ಮ್ಯಾನ್, ಹಾಗೆಯೇ ಒಳ್ಳೆಯ ಟ್ಯಾಕ್ಸ್ ಪೇಯರ್, ಅವನ ಮನೆ ಮೇಲಿನ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ.
ಅಶೋಕ್ ರೈ ನನ್ನ ಮಿತ್ರ, ಈಗ ಶತ್ರು ಎಂಬ ಡಿ.ವಿ.ಸದಾನಂದ ಗೌಡರ ಹೇಳಿಕೆ ವಿಚಾರ
ನಾನು ರಾಜಕೀಯದಲ್ಲಿ ಸಣ್ಣ ವ್ಯಕ್ತಿ, ಆದ್ರೆ ಡಿ.ವಿ. ಸದಾನಂದ ಗೌಡರು ದೇಶದ, ರಾಜ್ಯದ ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದವರು, ಅವರ ಬಗ್ಗೆ ಮಾತಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ, ನನ್ನ ಬಗ್ಗೆ ಹೆಚ್ಚೆನೂ ಅವ್ರು ಮಾತಾಡಿಲ್ಲ, ನನ್ನ ಮಿತ್ರನಲ್ಲ, ಶತ್ರು ಅಂತ ಹೇಳಿದ್ದಾರೆ. ಆದ್ರೆ ನಾನು ಯಾವತ್ತೂ ಕೂಡ ಶತ್ರುವಲ್ಲ, ಅವರ ಮಿತ್ರನೇ. ನನಗೆ ಯಾರೂ ಶತ್ರುಗಳಿಲ್ಲ, ಎಲ್ಲರೂ ಮಿತ್ರರೇ, ಆ ಮಹಾಲಿಂಗೇಶ್ವರ ದೇವರು ಎಲ್ಲರಿಗೂ ಒಳ್ಳೆ ಬುದ್ಧಿ ಕೊಡಲಿ ಎಂದು ಹೇಳಿದ್ದಾರೆ.