Connect with us

LATEST NEWS

ಮಲ್ಪೆ – ಬಲೆಗೆ ಬಿದ್ದ 30 ಕೆಜಿ ತೂಕದ ಕಾಂಡೈ ಮೀನು

ಉಡುಪಿ ನವೆಂಬರ್ 24: ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ 30 ಕೆ.ಜಿ ತೂಕದ ಕಾಂಡೈ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ನವೀನ್ ಸಾಲ್ಯಾನ್ ಎಂಬುವರ ದೋಣಿಯ ಗಾಳಕ್ಕೆ ಈ ಮೀನು ಬಿದ್ದಿದೆ.


ಭಾರಿ ಗಾತ್ರದ ಈ ಮೀನನ್ನು ಮಲ್ಪೆ ಬಂದರಿನಲ್ಲಿ ಹರಾಜು ಹಾಕಲಾಗಿದ್ದು, ಕೆ.ಜಿಗೆ 170 ರಂತೆ ಮಾರಾಟವಾಗಿದೆ, ಕಾಂಡೈ ಮೀನು ಸಣ್ಣ ಗಾತ್ರವಾಗಿದ್ದರೆ ಕೆಜಿ 220 ಕ್ಕೆ ಮಾರಟವಾಗುತ್ತಿತ್ತು, ಆದರೆ ದೊಡ್ಡ ಗಾತ್ರದ ಕಾಂಡೈ ಮೀನುಗಳಿಗೆ ಅಷ್ಟೊಂದು ದರ ಇಲ್ಲ ಎನ್ನುತ್ತಾರೆ ಸ್ಥಳೀಯ ಮೀನುಗಾರರು. ‌ಇನ್ನೂ ಇಷ್ಟು ದೊಡ್ಡ ಗಾತ್ರದ ಕಾಂಡೈ ಮೀನು ಮಲ್ಪೆ ಬಂದರಿನಲ್ಲಿ ನೋಡುಗರ ಗಮನ ಸೆಳೆಯಿತು.