LATEST NEWS
ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ನಾಲ್ವರು ಆರೋಪಿಗಳು ಆರೆಸ್ಟ್
ಮಂಗಳೂರು ನವೆಂಬರ್ 24: ಕರಾವಳಿಯನ್ನು ಬೆಚ್ಚಿಬಳಿಸಿದ್ದ 8 ವರ್ಷದ ಬಾಲಕಿ ಅತ್ಯಾಚಾರಗೈದು ಕೊಲೆ ಮಾಡಿ ಚರಂಡಿಗೆ ಎಸೆದ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಮಧ್ಯಪ್ರದೇಶ ಮೂಲದ ಮೂವರು ಹಾಗೂ ಓರ್ವ ಜಾರ್ಖಂಡ್ ಮೂಲದವನು ಎಂದು ತಿಳಿದು ಬಂದಿದೆ. ಇವರೆಲ್ಲರೂ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. ಬಡ ಕುಟುಂಬದ ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು ನವೆಂಬರ್ 21 ರಂದು ಮಧ್ಯಾಹ್ನ ಆಟವಾಡುತ್ತಿದ್ದ ಬಾಲಕಿಯನ್ನು ಅದೇ ಕಾರ್ಖಾನೆಯ ಆವರಣದಲ್ಲಿದ್ದ ರೂಂಗೆ ಕರೆದೊಯ್ದಿದ್ದಾರೆ. ನಂತರ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಿದ್ದಾರೆ.
ಇದರಿಂದ ಬಾಲಕಿಗೆ ಆಘಾತ ಆಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಬಾಲಕಿ ಕಿರಚಾಡಲು ಆರಂಭಿಸಿದ್ದು, ಒಬ್ಬ ಆರೋಪಿ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಕೃತ್ಯದ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ನೀರು ಹರಿಯುವ ಚರಂಡಿಗೆ ಬಾಲಕಿಯ ಶವವನ್ನು ಎಸೆದಿದ್ದಾರೆ.
You must be logged in to post a comment Login