Connect with us

LATEST NEWS

ಉಪವಾಸ ಆಚರಿಸುವುದು ಹೇಗೆ? ಉಪವಾಸದ ವಿವಿಧ ಹಂತಗಳು

ಉಪವಾಸವು ಸ್ವಯಂ ಶುದ್ಧೀಕರಣದ ಅತ್ಯುತ್ತಮ ವಿಧಾನವಾಗಿದೆ. ಇದು ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಪ್ರಯೋಜನಗಳನ್ನು ಹೊಂದಿದೆ. ಉಪವಾಸದ ಯಶಸ್ಸು ಉಪವಾಸದ ವಿಧಾನ, ಉಪವಾಸದ ಪ್ರಕಾರ ಮತ್ತು ಉಪವಾಸ ಮಾಡುವ ಸಂದರ್ಭದಲ್ಲಿನ ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳನ್ನು ಅವಲಂಬಿಸಿರುತ್ತದೆ.

ಉಪವಾಸ ಮಾಡುವುದು ಹೇಗೆ?

ನೀವು ಉಪವಾಸವನ್ನು ಪ್ರಾರಂಭಿಸುವ ಮೊದಲು, ನೀವು ವಿವಿಧ ರೀತಿಯ ಉಪವಾಸಗಳ ಆಯ್ಕೆಯನ್ನು ಗಮನಿಸಬೇಕಾಗುತ್ತದೆ. ನಿಮ್ಮ ದೇಹಕ್ಕೆ ಸರಿಹೊಂದುವ ಉಪವಾಸ ವಿಧಾನವನ್ನು ಆಯ್ಕೆ ಮಾಡುವುದಕ್ಕಾಗಿ ವೈದ್ಯರ ಸಹಾಯವನ್ನೂ ಪಡೆಯಬಹುದು. ಈ ಕೆಳಗಿನ ಅಂಶಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬಹುದು –

  • ನಿಮ್ಮ ಮಾನಸಿಕ ಸ್ಥಿರತೆ ಮತ್ತು ಇಚ್ಛಾಶಕ್ತಿ
  • ನಿಮ್ಮ ಹೊಟ್ಟೆಯ ಸಾಮರ್ಥ್ಯ
  • ದೋಷಕ್ಕನುಗುಣವಾದ ನಿಮ್ಮ ದೇಹ ಪ್ರಕಾರ
  • ನಿಮ್ಮ ಆಹಾರ ಪದ್ಧತಿ

ಉಪವಾಸವನ್ನು ಹೇಗೆ ಮಾಡಬೇಕೆಂಬುದರ ಕುರಿತು ಹಂತ ಹಂತದ ಮಾರ್ಗದರ್ಶನ

  • ಮೊದಲಿಗೆ ದಿನಗಳ ಸಂಖ್ಯೆಯನ್ನು ನಿರ್ಧರಿಸಿ.

ನಾನು ಕೇವಲ ಒಂದು ದಿನ ಉಪವಾಸವನ್ನು ಶಿಫಾರಸು ಮಾಡುತ್ತೇನೆ. ನೀವು ಒಮ್ಮೆಗೆ ಅನೇಕ ದಿನಗಳವರೆಗೆ ಉಪವಾಸವನ್ನು ಮಾಡಲು ಬಯಸಿದರೆ, ಎರಡು ಉಪವಾಸ ಅವಧಿಗಳ ನಡುವೆ ಕನಿಷ್ಠ ಒಂದು ವಾರದ ಅಂತರವನ್ನು ಇರಿಸುವುದು ಸೂಕ್ತ. ಈ ಬಗ್ಗೆ ನಿಮ್ಮ ವೈದ್ಯರ ಸಲಹೆ ಸ್ವೀಕರಿಸುವುದು ಅತ್ಯುತ್ತಮ.

  • ನೀವು ಜ್ಯೋತಿಷ್ಯ ಅಥವಾ ಸಂಖ್ಯಾಶಾಸ್ತ್ರವನ್ನು ಅನುಸರಿಸುವವರಾದರೆ, ಉಪವಾಸ ಆರಂಭಿಸುವುದಕ್ಕಾಗಿ ಶುಭ ದಿನವನ್ನು ಆರಿಸುವುದು ಉತ್ತಮ. ಇದರಿಂದ ನಿಮಗೆ ಮಾನಸಿಕ ಮತ್ತು ಆಧ್ಯಾತ್ಮಿಕ ಅನುಕೂಲತೆಗಳು ಉಂಟಾಗುತ್ತವೆ.
  • ಆರಂಭದಲ್ಲಿ ರಜಾದಿನಗಳಲ್ಲಿ ಉಪವಾಸ ಮಾಡುವುದು ಉತ್ತಮ. ಏಕೆಂದರೆ ನೀವು ಮನೆಯಲ್ಲಿರುವಾಗ ವಿಶ್ರಾಂತಿ ಪಡೆಯಬಹುದು. ಆದರೆ ಉಪವಾಸಕ್ಕಾಗಿ ರಜಾದಿನವನ್ನು ಆರಿಸುವುದು ಕೂಡಾ ತೊಂದರೆಯನ್ನುಂಟುಮಾಡುತ್ತದೆ. ನೀವು ಕೆಲಸ ಮಾಡುತ್ತಿದ್ದರೆ, ಅದರಲ್ಲೇ ತಲ್ಲೀನರಾಗುತ್ತೀರಿ ಮತ್ತು ಆಹಾರದ ಬಗ್ಗೆ ಯೋಚಿಸಲು ನಿಮಗೆ ಸಮಯವಿರುವುದಿಲ್ಲ. ಆದ್ದರಿಂದ ಹಸಿವಿನ ವಿಚಾರ ನೆನಪಿಗೆ ಬರುವುದಿಲ್ಲ. ರಜಾದಿನಗಳಲ್ಲಾದರೆ, ನಿಸ್ಸಂಶಯವಾಗಿ ನೀವು ಉಪವಾಸದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ ಮತ್ತು ಸದಾಕಾಲ ಹಸಿವು ಮತ್ತು ಆಹಾರದ ಬಗ್ಗೆ ಯೋಚಿಸುತ್ತಿರುತ್ತೀರಿ.

ಎಲ್ಲಾ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಿ

ಧೂಮಪಾನ ಅಥವಾ ಮದ್ಯಪಾನದಿಂದ ನಿಮ್ಮ ದೇಹಕ್ಕೆ ಹೆಚ್ಚಿನ ವಿಷಾಂಶಗಳು ಸೇರ್ಪಡೆಯಾಗುವುದರಿಂದ ನೀವು ಉಪವಾಸದ ಅವಧಿಯಲ್ಲಿ ಧೂಮಪಾನ ಅಥವಾ ಮದ್ಯಪಾನ ಮಾಡಬಾರದು. ದೇಹದಿಂದ ವಿಷಾಂಶಗಳನ್ನು ಹೊರಹಾಕುವುದಕ್ಕಾಗಿ ನೀವು ಉಪವಾಸವನ್ನು ಆಚರಿಸುತ್ತಿದ್ದೀರಿ ಎಂಬುವುದು ನೆನಪಿರಲಿ.

ಮಾಂಸಾಹಾರ ರಹಿತ ಉಪವಾಸ

ನೀವು ಉಪಾಹಾರವನ್ನು ಮಾತ್ರ ಸೇವಿಸಿ ಉಪವಾಸ ಮಾಡುವುದು ಅಥವಾ ದಿನಕ್ಕೆ ಒಂದು ಹೊತ್ತು ಮಾತ್ರ ಆಹಾರ ಸೇವಿಸುವ ಉಪವಾಸವನ್ನು ಮಾಡುತ್ತಿದ್ದರೆ, ಮಾಂಸಾಹಾರ ಸೇವನೆಯನ್ನು ಮಾಡಬೇಡಿ. ಉಪವಾಸದ ಮೂಲ ಉದ್ದೇಶವೆಂದರೆ ಆಹಾರ ಸೇವಿಸದಿರುವುದು ಅಥವಾ ಕಡಿಮೆ ಆಹಾರ ಸೇವಿಸದಿರುವುದು. ಉಪವಾಸ ಮತ್ತು ಆಧ್ಯಾತ್ಮಿಕತೆಗೆ ಸಂಬಂಧವಿದೆ. ಆದ್ದರಿಂದ ಉಪವಾಸದ ಸಮಯದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸದಿರುವುದು ಉತ್ತಮ.

ಉಪವಾಸದ ಹಿಂದಿನ ದಿನ ಸಾಕಷ್ಟು ಆಹಾರವನ್ನು ಸೇವಿಸಿರಿ

  • ಉಪವಾಸಕ್ಕೆ ಒಂದು ದಿನ ಮೊದಲು ನಿಮಗೆ ಅಗತ್ಯವಿರುವಷ್ಟು ಆಹಾರ ಸೇವನೆ ಮಾಡಿಕೊಳ್ಳಿ.
  • ಹಿಂದಿನ ದಿನ ರಾತ್ರಿ ಹೆಚ್ಚು ಉಪ್ಪು ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಇದು ಉಪವಾಸದ ದಿನದಂದು ಮುಂಜಾನೆ ನಿಮ್ಮಲ್ಲಿ ಜಾಸ್ತಿ ಬಾಯಾರಿಕೆಯನ್ನುಂಟುಮಾಡಬಹುದು.
  • ಹಿಂದಿನ ದಿನ ರಾತ್ರಿ ತಡವಾಗಿ ಆಹಾರ ಸೇವನೆ ಮಾಡಿ.

ಉಪವಾಸದ ದಿನ –

  • ಬೇಗನೆ ಎದ್ದೇಳಿ ಉಪವಾಸದ ದಿನ ಬೆಳಿಗ್ಗೆ ಬೇಗನೆ ಎದ್ದೇಳುವುದನ್ನು ಮರೆಯಬೇಡಿ.
  • ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಬಿಸಿನೀರು ಅಥವಾ ತಣ್ಣೀರಿನೊಂದಿಗೆ ತಲೆ ಸ್ನಾನ ಮಾಡಿ.
  • ಪ್ರಾಣಾಯಾಮ ಏಕಾಗ್ರತೆಯುಳ್ಳ ಮನಸ್ಸನ್ನು ಹೊಂದಲು ಪ್ರಾಣಾಯಾಮ ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ ಇದು ನಿಮ್ಮ ಹೊಟ್ಟೆ ಮತ್ತು ಶ್ವಾಸಕೋಶವನ್ನು ಸಹ ಬಲಪಡಿಸುತ್ತದೆ.
  • ಪ್ರಾರ್ಥನೆ ಮಾಡಿ ಆಂತರಿಕ ಶಕ್ತಿಗಾಗಿ ಪ್ರಾರ್ಥಿಸಿ.
  • ಯಾವುದಾದರೂ ಒಳ್ಳೆಯ ಪುಸ್ತಕಗಳನ್ನು ಓದಿ ಸ್ವಸಹಾಯ ಪುಸ್ತಕ ಅಥವಾ ಇನ್ನಾವುದೇ ಸಕಾರಾತ್ಮಕ ಪುಸ್ತಕವು ನಿಮ್ಮನ್ನು ಉತ್ತಮ ಕಾರ್ಯಗಳಿಗೆ ಪ್ರೇರೇಪಿಸುತ್ತದೆ. ನಿಮ್ಮ ಉಪವಾಸದ ದಿನ ನಿಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವ ಮೂಲಕ ಉತ್ತಮ ಜೀವನಶೈಲಿಯನ್ನು ಹೊಂದಲು ನಿರ್ಧರಿಸಿ. ಸ್ವಸಹಾಯ ಪುಸ್ತಕವು ನಿಮ್ಮ ಆಲೋಚನೆಗಳ ಪ್ರವಾಹವನ್ನು ಮರು-ಜೋಡಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಜೀವನಶೈಲಿಯನ್ನು ಹೊಂದಲು ಇರುವ ಉತ್ತಮ ಅವಕಾಶ ಎಂಬುವುದನ್ನು ಅರ್ಥ ಮಾಡಿಕೊಳ್ಳಿ. ಈ ತರಹದ ಪುಸ್ತಕಗಳು ನಿಮ್ಮ ಆಲೋಚನೆಗಳ ದೃಷ್ಟಿಕೋನವನ್ನು ಬದಲಾಯಿಸಲು ಸಹಾಯ ಮಾಡುತ್ತವೆ.
  • ನಿಮಗೆ ಸಾಧ್ಯವಾದಷ್ಟು ಹಸಿವನ್ನು ತಡೆಕೊಳ್ಳಲು ಪ್ರಯತ್ನಿಸಿ. ಸುಲಭವಾಗಿ ಬಿಟ್ಟುಕೊಡಬೇಡಿ. ನೀವು ಜ್ಯೂಸ್ ಉಪವಾಸ ಅಥವಾ ತರಕಾರಿ ಉಪವಾಸ ಮಾಡುತ್ತಿದ್ದರೆ, ಅತಿಯಾಗಿ ಸೇವನೆ ಮಾಡುವ ಒಲವು ಇರುತ್ತದೆ. ಆದರೆ ಉಪವಾಸವನ್ನು ಬಿಟ್ಟು ಬಿಡದಿರಲು ನಿರ್ಧರಿಸಿ. ಹೆಚ್ಚಿನ ಸ್ವಯಂ ನಿಯಂತ್ರಣವನ್ನು ನಿಮ್ಮದಾಗಿಸಿಕೊಳ್ಳಿ. ಉಪವಾಸದ ದಿನದಂದು ನೀವು ಸೇವಿಸುವ ಹಣ್ಣುಗಳು/ರಸ/ತರಕಾರಿ ಸಲಾಡ್ ಪ್ರಮಾಣವನ್ನು ನಿರ್ಧರಿಸಿ.
  • ವಿಶ್ರಾಂತಿ ತೆಗೆದುಕೊಳ್ಳಿ ಉಪವಾಸದ ಸಂದರ್ಭದಲ್ಲಿ ದೇಹವು ಕ್ಯಾಲೊರಿಗಳ ಪೂರೈಕೆಯಿಲ್ಲದೆ ಕಾರ್ಯ ನಿರ್ವಹಿಸಬೇಕು. ಸರಿಯಾದ ವಿಶ್ರಾಂತಿ ನಿಮಗೆ ಹೆಚ್ಚು ಸಮಯ ಆಹಾರ ಸೇವಿಸದೇ ಹಸಿವನ್ನು ತಡೆಕೊಳ್ಳುವ ಶಕ್ತಿಯನ್ನು ನೀಡುತ್ತದೆ.
  • ಬಿಸಿಲಿಗೆ ಮೈಯ್ಯೊಡ್ಡದಿರುವುದು ಉಪವಾಸವು ವಾತ ಮತ್ತು ಪಿತ್ತ ದೋಷಗಳನ್ನು ಹೆಚ್ಚಿಸುತ್ತದೆ. ಬಿಸಿಲು ಮತ್ತು ಗಾಳಿಗೆ ಮೈಯ್ಯೊಡ್ಡುವುದು ಕೂಡ ವಾತ ಮತ್ತು ಪಿತ್ತ ದೋಷಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಉಪವಾಸದ ಸಮಯದಲ್ಲಿ ಬಿಸಿಲು ಮತ್ತು ಗಾಳಿಯಿಂದ ದೂರವಿರುವುದು ಉತ್ತಮ.
  • ಅತಿ ಕಡಿಮೆ ವ್ಯಾಯಾಮ ಅಥವಾ ವ್ಯಾಯಾಮ ಮಾಡದಿರುವುದು ನೀವು ದಿನನಿತ್ಯ ವ್ಯಾಯಾಮ ಮಾಡುವವರಾಗಿದ್ದರೆ, ವ್ಯಾಯಾಮವನ್ನು ಬಹಳ ಕಡಿಮೆ ಅವಧಿಗೆ ಸೀಮಿತಗೊಳಿಸಿ, ಉಪವಾಸದ ದಿನದಂದು ಕೇವಲ ಸರಳ ವ್ಯಾಯಾಮಗಳನ್ನು ಮಾತ್ರ ಅಭ್ಯಾಸ ಮಾಬಹುದು.
  • ನಿಮ್ಮ ವೈದ್ಯರ ದೂರವಾಣಿ ಸಂಖ್ಯೆ ನಿಮ್ಮಲ್ಲಿರಲಿ ಇದರಿಂದ ತುರ್ತು ಸಂದರ್ಭಗಳಲ್ಲಿ ತಕ್ಷಣ ನೀವು ವೈದ್ಯರ ಸಹಾಯವನ್ನು ಪಡೆಯಬಹುದು.
  • ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಉಪವಾಸವನ್ನು ಆಚರಿಸಿ ಇದು ಸಂಬಂಧವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಉಪವಾಸವನ್ನು ಉತ್ತಮವಾದ ರೀತಿಯಲ್ಲಿ ಆನಂದಿಸುವುದು ಸಾಧ್ಯವಾಗುತ್ತದೆ. ಉಪವಾಸ ಮಾಡುವತ್ತ ನಿಮ್ಮ ಪ್ರೇರಣೆ ಬಲಗೊಳ್ಳುತ್ತದೆ.
  • ನಿಮ್ಮ ನಿಯಮಿತ ಔಷಧಿಗಳು ಉಪವಾಸದ ಸಮಯದಲ್ಲಿ ನೀವು ಸೇವಿಸಬೇಕಾದ ಅಥವಾ ಸೇವಿಸದಿರಬಹುದಾದ ನಿಯಮಿತ ಔಷಧಿಗಳ ಬಗ್ಗೆ ನೀವು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಹೊಟ್ಟೆಯ ಕಿರಿಕಿರಿಯನ್ನು ಉಂಟುಮಾಡುವ ಕೆಲವು ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಸೇವಿಸದೇ ಇರಬೇಕಾಗಬಹುದು.

ಆದ್ದರಿಂದ ಉತ್ತಮವಾದ ಯೋಜನೆಯನ್ನು ರೂಪಿಸಿ, ಉಪವಾಸದಿಂದ ಗರಿಷ್ಠ ಲಾಭಗಳನ್ನು ಪಡೆಯಲು ಪ್ರಯತ್ನಿಸಿ.

ಅಸ್ತಮಾ ಮತ್ತು ಕೆಮ್ಮಿಗೆ ಶುಂಠಿ, ನೆಲ್ಲಿಕಾಯಿ, ಒಣದ್ರಾಕ್ಷಿ ಮತ್ತು ಜೇನುತುಪ್ಪದ ಮನೆಮದ್ದು

ಲೇಖಕರು: ಡಾ. ಜನಾರ್ಧನ ವಿ ಹೆಬ್ಬಾರ್

ಆಯುರ್ವೇದ ವೈದ್ಯರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಈಝೀ ಆಯುರ್ವೇದ ಆಸ್ಪತ್ರೆ, ಮಂಗಳೂರು

ಲೇಖನವನ್ನು ಡಾ. ಜನಾರ್ಧನ ವಿ ಹೆಬ್ಬಾರ್ ಅವರು ಬರೆದಹಿತ್ತಲ ಗಿಡವೇ ಮದ್ದುಎಂಬ ಪುಸ್ತಕದಿಂದ ಆರಿಸಲಾಗಿಸಿ. ಪುಸ್ತಕವನ್ನು ಖರೀದಿಸಲು ಕೆಳಗಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ

 

Share Information
Continue Reading
Advertisement
2 Comments

2 Comments

  1. Pingback: ಅಸ್ತಮಾ ಮತ್ತು ಕೆಮ್ಮಿಗೆ ಶುಂಠಿ, ನೆಲ್ಲಿಕಾಯಿ, ಒಣದ್ರಾಕ್ಷಿ ಮತ್ತು ಜೇನುತುಪ್ಪದ ಮನೆಮದ್ದು - themangaloremirror.in

Leave a Reply

Your email address will not be published. Required fields are marked *