KARNATAKA
ಪೆಟ್ರೋಲ್ ಪಂಪ್ ನ ಮಾಲೀಕರು ಹೇಗೆ ಲಾಭ ಮಾಡುತ್ತಾರೆ ? ನೀವು ಪೆಟ್ರೋಲ್ ಪಂಪ್ ನ ಒಡೆಯರಾಗಬೇಕೆ?
ಛೆ ಪೆಟ್ರೋಲ್ ಖಾಲಿ ಆಯ್ತು ಮಾರಾಯ… ಸ್ವಲ್ಪ ಪೆಟ್ರೋಲ್ ತುಂಬಿಸಿಕೊಂಡು ಬರ್ತೇನೆ ಆಯ್ತಾ… ಅಂತ ಹೇಳಿ ಪೆಟ್ರೋಲ್ ತುಂಬಲು ಪಂಪಿಗೆ ಹೋದಾಗ ಮೀಟರ್ ತಿರುಗಿದಂತೆ ನಮ್ಮ ತಲೆನೂ ತಿರುಗಿ, ಇವರಿಗೆ ಎಷ್ಟು ಲಾಭ ಇರಬಹುದು ಅಂತ ಯೋಚನೆ ಮಾಡುತ್ತೇವೆ ಅಲ್ಲವೇ ?
ಹಾಗಾದರೆ ಹಾಗೆ ಒಂದು ಅಂದಾಜಿನ ಲೆಕ್ಕ ಮಾಡೋಣ ಬನ್ನಿ. ಇನ್ನು ಯಾರೆಲ್ಲ ಪೆಟ್ರೋಲ್ ಪಂಪ್ ಒಡೆಯರಾಗಬೇಕು ಅಂತ ಯೋಚನೆ ಮಾಡುತ್ತ ಇರುವವರಿಗೂ ಸ್ವಲ್ಪ ಸಹಾಯವಾದಂತೆ ಅಲ್ಲವೇ ?
ಪೆಟ್ರೋಲ್ ಪಂಪ್ ಒಡೆತನಕ್ಕೆ ಬೇಕಾದ ಅರ್ಹತೆಗಳು:
1. 1300 – 5000 ಚದರ ಅಡಿ ಜಾಗ ಬೇಕಾಗುತ್ತದೆ. ಇದು ಸಾಮಾನ್ಯವಾಗಿ ಸಿಟಿ ಯಲ್ಲಿ ಪೆಟ್ರೋಲ್ ಪಂಪ್ ಹಾಕಲು ಬಯಸಿದರೆ 1300 ಚದರ ಅಡಿ ಅಥವಾ ಹಳ್ಳಿ ಕಡೆ ಆದರೆ ಸುಮಾರು 5000 ಚದರ ಅಡಿಯಷ್ಟು ಜಾಗ ಬೇಕಾಗುತ್ತದೆ. ಮತ್ತೆ ಬೇಕಾಗಿರುವ ಜಾಗ ಕಂಪನಿಯ ನಿಯಮವನ್ನೂ ಅವಲಂಬಿಸಿರುತ್ತದೆ.
2. 21-55 ವಯಸ್ಸಿನವರಿರಬೇಕು
3.ಕನಿಷ್ಠ ವಿದ್ಯಾಹ್ರತೆ ಸಿಟಿ ಕಡೆ ಆದರೆ ನೋಂದಣಿದಾರನು PUC ಮತ್ತು ಹಳ್ಳಿ ಕಡೆ ಆದರೆ SSLC ಆಗಿರಬೇಕು
4.ಕಡಿಮೆಯೆಂದರೆ 75 ಲಕ್ಷದಿಂದ 1.8 ಕೋಟಿವರೆಗೆ ಬಂಡವಾಳದ ಅವಶ್ಯಕತೆ ಇರುತ್ತದೆ.
5. 15-20 ಲಕ್ಷದಷ್ಟು ಉಳಿತಾಯ ಖಾತೆಯಲ್ಲಿ ಇಡಬೇಕಾಗುತ್ತದೆ.
6. ಕನಿಷ್ಠಪಕ್ಷ 4000-4500 ದಸ್ತು ಪೆಟ್ರೋಲ್ ಮತ್ತು ಡೀಸೆಲ್ ಸಾಗಿಸಲು ಸಾಮರ್ಥ್ಯವಿರುವ ಲಾರಿ ಬೇಕಾಗುತ್ತದೆ.
ಇನ್ನು ಅಂದಾಜು ಲಾಭ ಮತ್ತೆ ಖರ್ಚು ಲೆಕ್ಕ ಮಾಡೋಣ:
ಸಿಟಿಯಲ್ಲಿ 5000 ಲೀಟರ್ ಡೀಸೆಲ್ ಮಾರಾಟವಾದರೆ 2 ರೂಪಾಯಿಯಂತೆ ಕಮಿಷನ್ ತೆಗೆದುಕೊಂಡರೆ, ದಿನಕ್ಕೆ ಹತ್ತು ಸಾವಿರ ಹಾಗು ತಿಂಗಳಿಗೆ 3 ಲಕ್ಷ ರೂಪಾಯಿ ವ್ಯಾಪಾರ ಮೊತ್ತ. ಹಾಗೆಯೆ 2000 ಸಾವಿರ ಪೆಟ್ರೋಲ್ ಮಾರಾಟವಾದರೆ 3 ರೂಪಾಯಿಯಂತೆ ಕಮಿಷನ್ ತೆಗೆದುಕೊಂಡರೆ, ದಿನಕ್ಕೆ ಆರು ಸಾವಿರ ಹಾಗು ತಿಂಗಳಿಗೆ 1.8 ಲಕ್ಷ ರೂಪಾಯಿ ವ್ಯಾಪಾರ ಮೊತ್ತ. ಇನ್ನು ತಿಂಗಳಿಗೆ ಸಾಮಾನ್ಯವಾಗಿ 7 ಜನರ ಸಂಬಳ 80,000 ದಂತೆ ತೆಗೆದುಕೊಳ್ಳೋಣ ಹಾಗು ವಿದ್ಯುತ್ ಬಿಲ್ 30,000 ಸಾವಿರದಂತೆ ತೆಗೆದುಕೊಂಡರೆ ಇತರೆ ಖರ್ಚು 20,000 ತೆಗೆದುಕೊಳ್ಳೋಣ.
ತಿಂಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ನಿಂದ ಬಂದ 4,80,000೪ ವ್ಯಾಪಾರ ಮೊತ್ತದಿಂದ ಒಟ್ಟು ಅಂದಾಜು ಖರ್ಚು 1,30,000 ಕಳೆದರೆ ಬಾಕಿ ಉಳಿಯುವ ಲಾಭ 3,50,000. ಇದು ಬರೀ ಊಹೆಯ ಲೆಕ್ಕ. ಇದು ನೀವು ಇರುವ ಜಾಗದ ಜನಸಂಖ್ಯೆಯನ್ನು ಅವಲಂಭಿಸಿರುತ್ತದೆ. ಹೀಗೆದ್ದರೆ ಜಾಸ್ತಿ ಲಾಭವೂ ಮಾಡಿಕೊಳ್ಳಬಹುದು.
ಇಷ್ಟೆಲ್ಲಾ ಬಂಡವಾಳ ಹೂಡಿಕೆ ಮಾಡಿ ಇಷ್ಟೇ ಲಾಭ ಸಾಕು ಎಂದಾದರೆ ಪೆಟ್ರೋಲ್ ಪಂಪ್ ಆರಂಭಿಸಿ. ಅಥವಾ ಇಷ್ಟೇ ಬಂಡವಾಳದಲ್ಲಿ ಬೇರೆ ವ್ಯಾಪಾರ-ವ್ಯವಹಾರದಲ್ಲಿ ಇದಕ್ಕಿಂತ ಹೆಚ್ಚಿನ ಲಾಭ ಮಾಡಬಹುದೇ ಎಂದು ಯೋಚಿಸಿ ನಿರ್ಣಯ ತೆಗೆದುಕೊಳ್ಳಿ.ನಿಮ್ಮ ವ್ಯವಹಾರಕ್ಕೆ ಶುಭವಾಗಲಿ.
ಸಚಿನ್ ಕೃಷ್ಣ ಭಟ್, ಬದಿಕೋಡಿ