LATEST NEWS
ತೆಂಕಪೇಟೆಯ ಶ್ರೀರಾಮ ಭವನ ಹೊಟೇಲ್ ಮಾಲಕ ನಾಪತ್ತೆ

ಉಡುಪಿ ಎಪ್ರಿಲ್ 13: ನಗರದ ತೆಂಕಪೇಟೆಯ ಶ್ರೀರಾಮ ಭವನ ಹೊಟೇಲ್ ಮಾಲಕ, ಉಡುಪಿ ಹರಿಶ್ಚಂದ್ರ ಮಾರ್ಗ ನಿವಾಸಿ ಅಜಿತ್ ಕುಮಾರ್ ಎಂಬವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಎಪ್ರಿಲ್ 12 ರಂದು ಸಂಜೆ ಹೊಟೇಲಿನ ತಿಂಡಿಯನ್ನು ಪಾರ್ಸೆಲ್ ಕೊಡಲು ಅವರ ಸ್ಕೂಟರ್‌ನಲ್ಲಿ ಹೋದವರು ಹೋಟೆಲ್‌ಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಇವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 Comment