KARNATAKA
ಕಾಸರಗೋಡಿನಲ್ಲಿ ಮಾದಕ ತಾರೆ ಸನ್ನಿ ಲಿಯೋನ್ , ನಟಿ ನೋಡಲು ಮುಗಿಬಿದ್ದ ಅಭಿಮಾನಿಗಳು..!

ಕಾಸರಗೋಡು : ಮಾಜಿ ನೀಲಿಚಿತ್ರ ನಟಿ ಸನ್ನಿ ಲಿಯೋನ್ ಕಾಸರಗೋಡಿನಲ್ಲಿ ಬೀಡು ಬಿಟ್ಟಿದ್ದಾಳೆ. ಕಾಸರಗೋಡಿನ ಸೀತಂಗೋಳಿ ಸಮೀಪದ ಶೇಣಿಯಲ್ಲಿ ಸಿನಿಮಾ ಸನ್ನಿ ಲಿಯೋನ್ ಅವರ ಹಿಂದಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು ಅದರಲ್ಲಿ ಭಾಗಿಯಾಗಿದ್ದಾಳೆ.
ಶೇಣಿಯ ಶಾಲೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು ಹಾಟ್ ತಾರೆ ಸನ್ನಿಯ ಮಾದಕ ನೋಟವನ್ನ ನೋಡಲು ರಸ್ತೆ ಬದಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ ಎನ್ನಲಾಗಿದೆ. ಕಾಸರಗೋಡಿನ ಈ ಶೇಣಿ ಎಂಬ ಸುಂದರ ಪ್ರದೇಶ ಸಿನಿಮಾ ಚಿತ್ರೀಕರಣಕ್ಕೆ ಹೆಸರುವಾಸಿಯಾಗಿದ್ದು ಹಲವಾರು ಪರಭಾಷಾ ಚಲನಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿದೆ.
