LATEST NEWS
ಮಸಾಜ್ ನೆಪದಲ್ಲಿ ಹನಿಟ್ರ್ಯಾಪ್ : 3 ಯುವತಿಯರು ಸೇರಿ 6 ಮಂದಿ ಬಂಧನ
ಮಸಾಜ್ ನೆಪದಲ್ಲಿ ಹನಿಟ್ರ್ಯಾಪ್ : 3 ಯುವತಿಯರು ಸೇರಿ 6 ಮಂದಿ ಬಂಧನ
ಮಂಗಳೂರು ಮಾರ್ಚ್ 23: ಮಸಾಜ್ ನೆಪದಲ್ಲಿ ನಂಬಿಸಿ ಹನಿಟ್ರ್ಯಾಪ್ ಮಾಡಿ ನಿವೃತ್ತ ಸರಕಾರಿ ಉದ್ಯೋಗಿಯಿಂದ 3 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಸಾಜ್ ಮಾಡುವ ನೆಪದಲ್ಲಿ ನಿವೃತ್ತ ಸರಕಾರಿ ಉದ್ಯೋಗಿಯನ್ನು ನಂಬಿಸಿ ಹನಿಟ್ರ್ಯಾಪ್ ಮಾಡಿ 3 ಲಕ್ಷ ಹಣವನ್ನು ಆರೋಪಿಗಳು ಸುಲಿಗೆ ಮಾಡಿದ್ದರು,
ಅಲ್ಲಗೆ ಆರೋಪಿಗಳು ಮತ್ತೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದರು.
ಪ್ರಕರಣದ ಬೆನ್ನತ್ತಿದ ಮಂಗಳೂರು ಸಿಸಿಬಿ ಪೊಲೀಸರು ಮೂವರು ಯುವತಿಯರ ಸಹಿತ ಆರು ಮಂದಿ ಬಂಧಿಸಿದ್ದಾರೆ.
ಬಂಧಿತರನ್ನು ಜೈಲ್ ರೋಡ್ ನಿವಾಸಿ ಪ್ರೀತೇಶ್ (36), ಕಳಸ ನಿವಾಸಿ ರವಿ(35), ಶಕ್ತಿನಗರ ನಿವಾಸಿ ರಮೇಶ್(35) ಎಂದು ಗುರುತಿಸಲಾಗಿದ್ದು ಹನಿಟ್ರ್ಯಾಪ್ ಬಳಿಕ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದರು.
You must be logged in to post a comment Login