DAKSHINA KANNADA
ಮುಲ್ಕಿ ಪೊಲೀಸರ ಕಾರ್ಯಾಚರಣೆ ಕುಖ್ಯಾತ ವಾಹನಗಳ್ಳರ ಬಂಧನ
ಮುಲ್ಕಿ ಪೊಲೀಸರ ಕಾರ್ಯಾಚರಣೆ ಕುಖ್ಯಾತ ವಾಹನಗಳ್ಳರ ಬಂಧನ
ಮಂಗಳೂರು ಮಾರ್ಚ್ 22: ಸಿಸಿಬಿ ಮತ್ತು ಮುಲ್ಕಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಕುಖ್ಯಾತ ವಾಹನ ಕಳ್ಳರನ್ನು ಬಂಧಿಸಲಾಗಿದ್ದು, ಬಂಧಿತರಿಂದ ಕಳವು ಮಾಡಲಾಗಿದ್ದ 50 ಲಕ್ಷ ಮೌಲ್ಯದ ಸುಮಾರು 5 ಕಾರುಗಳ ವಶಕ್ಕೆ ಪಡೆದುಕೊಂಡಿದ್ದಾರೆ.
ಕಳವು ಮಾಡಿದ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವ ಖಚಿತ ಮಾಹಿತಿಯ ಮೇರೆಗೆ ಮುಲ್ಕಿ ಪೊಲೀಸರು ಮತ್ತು ಸಿಸಿಬಿ ಘಟಕ ಜಂಟಿ ಕಾರ್ಯಾಚರಣೆ ನಡೆಸಿ ಕಾರುಗಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಫಯಾಜ್ ಎಂದು ಗುರುತಿಸಲಾಗಿದ್ದು , ಈತ ಕುಖ್ಯಾತ ನಕಲಿ ಆರ್ ಸಿ ಜಾಲದ ಆರೋಪಿ ಕುಕ್ಕಾಜೆ ಅಬೂಬಕ್ಕರ್ ಸಾಧಿಕ್ ನ ಸಹಚರನಾಗಿದ್ದು, ಈತ 2018 ಮಾರ್ಚ್ ತಿಂಗಳಲ್ಲಿ ಕಳವು ಮಾಡಿದ್ದ ಕಾರನ್ನು ಚಲಾಯಿಸಿಕೊಂಡು ಬಂದಿದ್ದ.
ಆರೋಪಿ ಫಯಾಜ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಸುರತ್ಕಲ್ ನ ಮುಕ್ಕಾದಲ್ಲಿದ್ದ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ, ಬಂಧಿತರನ್ನು ರೋಹನ್ ಶೈಲೇಶ್ ಡಿಸೋಜ, ಈಸ ರೋಶನ್, ಡೆವಿಡ್ ಕ್ಲಿಂಟನ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಮಾರಾಟಕ್ಕೆಂದು ತಂದಿದ್ದ 4 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಬಂಧಿತರಿಂದ ಕಳವು ಮಾಡಿದ ಸುಮಾರು 5 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಶಕ್ಕೆ ತೆಗೆದುಕೊಂಡ ಕಾರುಗಳ ಒಟ್ಟು ಮೌಲ್ಯ 50 ಲಕ್ಷ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳ ಮೇಲೆ ಉಳ್ಳಾಲ , ಪಣಂಬೂರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ
You must be logged in to post a comment Login