Connect with us

    LATEST NEWS

    ಉಡುಪಿ – ಹೋಮ್ ನರ್ಸ್ ಚಾಲಾಕಿತನ – ಕೆಲಸಕ್ಕಿದ್ದ ಮನೆಯಿಂದಲೇ ಲಕ್ಷಾಂತರ ಹಣ ಲೂಟಿ

    ಉಡುಪಿ ಡಿಸೆಂಬರ್ 09: ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮನೆಯಿಂದಲೇ ಲಕ್ಷಾಂತರ ರೂಪಾಯಿ ಹಣವನ್ನು ಲೂಟಿ ಹೊಡೆದು ಪರಾರಿಯಾದ ಘಟನೆ ಉಡುಪಿಯಲ್ಲಿ ನಡೆದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
    ಬಂಧಿತ ಆರೋಪಿಯನ್ನು ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳ (34) ಎಂದು ಗುರುತಿಸಲಾಗಿದೆ.


    ಮಾತಾ ಸೆಲ್ಯೂಷನ್ ಹೋಮ್ ನರ್ಸ್ ಇವರಿಂದ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳ ಎಂಬಾತನನ್ನು ಹೋಂ ನರ್ಸ್ ಆಗಿ ಕೆಲಸಕ್ಕೆ ಇಟ್ಟುಕೊಂಡಿದ್ದು, ಪ್ರವೀಣ ಡಿಸೆಂಬರ್ 4ರ ಸಂಜೆ 6:30ರಿಂದ ರಾತ್ರಿ 9:00 ಗಂಟೆಯ ನಡುವೆ ನಾಪತ್ತೆಯಾಗಿದ್ದು, ಕೆಲಸ ಮಾಡುವ ಮನೆಯಿಂದಲೂ ನಾಪತ್ತೆಯಾಗಿದ್ದ. ಹೋಗುವಾಗ ಮನೆಯಲ್ಲಿ ಹಾಗೂ ಬೊಲೆರೋ ವಾಹನದ ಡ್ಯಾಶ್ ಬೋರ್ಡನಲ್ಲಿಟ್ಟಿದ್ದ 3,45,000 ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಈ ಕಳ್ಳತನದ ಬಗ್ಗೆ ಪುತ್ತೂರು ಗ್ರಾಮದ ಸಂತೋಷ್ ಎಂಬವರು ಉಡುಪಿ ನಗರ ಠಾಣೆಯಲ್ಲಿ ಡಿಸೆಂಬರ್ 5ರಂದು ದೂರು ದಾಖಲಿಸಿದ್ದರು.

    ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ನೇಮಿಸಲಾಗಿತ್ತು. ಈ ತಂಡ ಡಿಸೆಂಬರ್ 7ರಂದು ಬಾಗಲಕೋಟೆ ತಾಲೂಕು ಹುನಗುಂದದಲ್ಲಿ ಆರೋಪಿ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳನನ್ನು ವಶಕ್ಕೆ ಪಡೆದು 3,13,500 ರೂ. ಹಣವನ್ನು ಸ್ವಾಧೀನ ಪಡಿಸಿಕೊಂಡಿದೆ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply