Connect with us

    LATEST NEWS

    ಬಿಜೆಪಿ ಜೈಲ್ ಬರೋ – ಬಿಜೆಪಿಯ ಈ ಸಂತತಿಯಾದರೂ ಜೈಲಿಗೆ ಹೋಗಲಿ- ರಾಮಲಿಂಗಾ ರೆಡ್ಡಿ

    ಬಿಜೆಪಿ ಜೈಲ್ ಬರೋ – ಬಿಜೆಪಿಯ ಈ ಸಂತತಿಯಾದರೂ ಜೈಲಿಗೆ ಹೋಗಲಿ- ರಾಮಲಿಂಗಾ ರೆಡ್ಡಿ

    ಉಡುಪಿ ಜನವರಿ 12: ಬಿಜೆಪಿ ಸಂಘಪರಿವಾರದವರ ವಿರುದ್ದ ಸಿಎಂ ಹೇಳಿಕೆ ಖಂಡಿಸಿ ಬಿಜೆಪಿ ಜೈಲ್ ಭರೋ ಪ್ರತಿಭಟನೆಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲಿ ಎಂದು ಹೇಳಿದರು. ಬಿಜೆಪಿಯವರ ಪೂರ್ವಜರು ಸ್ವಾತಂತ್ರ ಹೋರಾಟದಲ್ಲಿ ಜೈಲು ಹೋಗಿಲ್ಲ, ಈ ಸಂತತಿಯವರಾದರೂ ಈ ಮೂಲಕ ಜೈಲಿಗೆ ಹೋಗಲಿ ಎಂದು ವ್ಯಂಗ್ಯವಾಡಿದರು. ಕರಾವಳಿ ಜಿಲ್ಲೆಯಲ್ಲಿ ಬಲಿಷ್ಠ ಪೊಲೀಸ್ ವ್ಯವಸ್ಥೆ ಇದೆ.

    ಆದರೆ ಇಲ್ಲಿರುವ ಸಂಘಟನೆಗಳ ಚುರುಕುತನ ಕಡಿಮೆಯಾಗಬೇಕಿದೆ ಎಂದು ಹೇಳಿದರು. ಸಂಘಟನೆಗಳನ್ನು ಜನರೇ ದೂರವಿಡುವ ಕಾಲ ಬರಲಿದೆ ಎಂದು ಹೇಳಿದ ಗೃಹ ಸಚಿವರು ಜಾಲತಾಣಗಳಲ್ಲಿ ಗಲಭೆಗೆ ಕುಮ್ಮಕ್ಕು ನೀಡುವವರ ವಿರುದ್ಧ ಕ್ರಮ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

    ಸದ್ಯ ಯಾವುದೇ ಸಂಘಟನೆಗಳ ನಿಷೇಧ ವಿಚಾರ ಪ್ರಸ್ತಾಪ ಇಲ್ಲ, ಆದರೆ ಸಂಘಟನೆಗಳ ನಿಷೇಧ ಬಗ್ಗೆ ಚರ್ಚೆ ಇರುವುದು ನಿಜ, ಸಿಎಂ ಪ್ರವಾಸ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಶಾಂತಿ ಭಂಗ ತರುವ ಯಾವುದೇ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಕನ್ನಡ ಪರ ಸಂಘಟನೆಗೂ, ಸನ್ನಿ ಲಿಯೋನ್ ನೈಟ್ಸ್ ಅನುಮತಿ ನಿರಾಕರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ ಗೃಹ ಸಚಿವರು, ಸನ್ನಿಲಿಯೋನ್ ನೈಟ್ಸ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದು ಬೆಂಗಳೂರು ಪೊಲೀಸ್ ಆಯುಕ್ತರ ನಿರ್ಧಾರವಾಗಿದೆ ಎಂದು ಹೇಳಿದರು.ಮುಂದೆ ಸನ್ನಿ ಲಿಯೋನ್ ಆಗಮಿಸಿದರೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply