Connect with us

MANGALORE

ಹಿಟ್ ಅಂಡ್ ರನ್ ; ಸ್ಕೂಟರ್ ಸವಾರ ಬಲಿ

ಮಂಗಳೂರು, ಜುಲೈ 11: ಕಾರಿನ ಧಾವಂತಕ್ಕೆ ಸಿಲುಕಿದ ಸ್ಕೂಟರ್ ಪಲ್ಟಿಯಾಗಿದ್ದು ರಸ್ತೆಗೆ ಬಿದ್ದ ಸವಾರ ಹಿಂದಿನಿಂದ ಬರುತ್ತಿದ್ದ ಸಿಮೆಂಟ್ ಲಾರಿಯಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳೂರಿನ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.

ಮೃತಪಟ್ಟ ಯುವಕ

ಸ್ಕೂಟರ್ ಸವಾರನಾಗಿದ್ದ ಉಳ್ಳಾಲ ಬಂಡಿಕೊಟ್ಯ ನಿವಾಸಿ ಉಬೇದ್ (28) ಮೃತಪಟ್ಟ ಯುವಕ. ಉಬೇದ್ ಗೆ ಜುಲೈ 23 ರಂದು ಮದುವೆ ನಿಶ್ಚಯವಾಗಿತ್ತು. ಸ್ಕೂಟರ್ ನಲ್ಲಿ ಸಹಸವಾರನಾಗಿದ್ದ ಯುವಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಕಾರಿನ ಮಾಲಕ

ಹಿಟ್ ಅಂಡ್ ರನ್ ಪರಾರಿಯಾಗಲು ಯತ್ನಿಸಿದ ಕಾರನ್ನು ತೊಕ್ಕೊಟ್ಟಿನಲ್ಲಿ ಸಾರ್ವಜನಿಕರು ಅಡ್ಡಗಟ್ಟಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕಾರಿನಲ್ಲಿದ್ದ ಸೋಮೇಶ್ವರ ಪುರಸಭಾ ವ್ಯವಸ್ಥಾಪಕ ಕೃಷ್ಣ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಕಾರಿ ಅಧಿಕಾರಿಯಾಗಿದ್ದು ತನ್ನ ಕಾರು ಡಿಕ್ಕಿಯಾಗಿ ಯುವಕರು ಸ್ಥಳದಲ್ಲೇ ದುರಂತಕ್ಕೀಡಾದರೂ ಅವರನ್ನು ಬಿಟ್ಟು ಹೋಗಿ ಮಾನವೀಯತೆ ಮರೆತು ವರ್ತಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

Facebook Comments

comments