Connect with us

LATEST NEWS

ಮಂಗಳೂರಿನಲ್ಲಿ ಕೊರೊನಾ ನಾಗಾಲೋಟ, 2 ಸಾವಿರ ದಾಟಿದ ಸೋಂಕು, ಮತ್ತೆ ಮೂರು ಸಾವು!!

ಮಂಗಳೂರು ಜುಲೈ11: ದಕ್ಷಿಣಕನ್ನಡದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆಸಿದ್ದು, ಇಂದು 186 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಜಿಲ್ಲೆಯಲ್ಲಿ ಮೂವರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಂದಿನ 186 ಪ್ರಕರಣಗಳೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 2034 ಕ್ಕೆ ಏರಿಕೆಯಾಗಿದೆ.

ಇಂದು ದಾಖಲಾದ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಲ್ಲಿ 37, 64, SARI 17, ಸಂಪರ್ಕ ಪತ್ತೆಯಾಗದ 32 ಮಂದಿ ಕತಾರ್, ದುಬೈನಿಂದ ಬಂದಿದ್ದ 10 ಜನರಿಗೆ ಸೋಂಕು ತಗುಲಿದ್ದು, ಉಳ್ಳಾಲದ ರ್ಯಾಂಡಮ್ ಟೆಸ್ಟ್ ನಲ್ಲಿ 13 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ಜಿಲ್ಲೆಯಲ್ಲಿ 29 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1211 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.