Connect with us

    DAKSHINA KANNADA

    ಸಾವಿರ ಹಿಂದೂ ಕಾರ್ಯಕರ್ತರ ಪಟ್ಟಿ ನೀಡುತ್ತೇವೆ….ತಾಕತ್ತಿದ್ದರೆ ಎಲ್ಲರನ್ನೂ ಗಡಿಪಾರು ಮಾಡಲಿ – ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ

    ಪುತ್ತೂರು ಎಪ್ರಿಲ್ 04 : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಕಳೆದ 2-3 ತಿಂಗಳಿನಿಂದ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಪ್ರಕರಣ ಸಹಿತ ಗಡಿಪಾರು ಮಾಡುವ ಕಾರ್ಯಕ್ಕೆ ಕೈ ಹಾಕುತ್ತಿದ್ದು, ಈ ಪ್ರಕ್ರಿಯೆಯನ್ನು ನಿಲ್ಲಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರಕಾರ ಜವಾಬ್ದಾರಿಯಾಗಲಿದೆ ಎಂದು ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.


    ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೂ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ನಿಲ್ಲಿಸದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡುವ ಪರಿಸ್ಥಿತಿ ಬರಲಿದೆ ಎಂದ ಅವರು, ಈ ರೀತಿ ಧರ್ಮ ರಕ್ಷಣೆ ಜತೆ ಗೋಹತ್ಯೆ, ಲವ್ ಜಿಹಾದಿ ಮಟ್ಟ ಹಾಕು ಕೆಲಸವನ್ನಷ್ಟೇ ನಮ್ಮ ಕಾರ್ಯಕರ್ತರು ಮಾಡುತ್ತಿದ್ದು, ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ಹಾಗಂತ ಗಡಿಪಾರು ಆದೇಶ ಮಾಡುವುದಾದರೆ ಸಾವಿರ ಹಿಂದೂ ಕಾರ್ಯಕರ್ತರ ಪಟ್ಟಿ ನೀಡುತ್ತೇವೆ. ತಾಕತ್ತಿದ್ದರೆ ಎಲ್ಲರನ್ನೂ ಗಡಿಪಾರು ಮಾಡಲಿ ಎಂದು ಸವಾಲೆಸೆದರು.


    ಈ ರೀತಿಯ ಪ್ರಕ್ರಿಯೆಗಳಿಂದ ಸರಕಾರವಿರಲಿ, ಇಲಾಖೆ ಇರಲಿ ಹಿಂದೂ ಕಾರ್ಯಕರ್ತರ ಆತ್ಮ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ಇದು ಖಂಡನೀಯ. ಇದೀಗ ಸಂಘಟನೆಯ ಭರತ್ ಕುಮ್ಡೇಲು ಅವರಿಗೆ ಗಡಿಪಾರು ಆದೇಶ, ಜಯಪ್ರಕಾಶ್ ಹಾಗೂ ಜಯರಾಮ ಎಂಬರ ಮೇಲೆ ಗೂಂಡಾಕಾಯ್ದೆ ಪ್ರಕರಣ ದಾಖಲು ಮಾಡುವ ಮೂಲಕ ಸರಕಾರಿ ವ್ಯವಸ್ಥೆಯೇ ಗೂಂಡಾಗಿರಿ ಮಾಡುತ್ತಿದೆ. ಇದನ್ನು ಕಾನೂನಾತ್ಮಕವಾಗಿ ಹೋರಾಡುವ ಶಕ್ತಿ ನಮ್ಮ ಸಂಘಟನೆಗಿದೆ ಎಂದು ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply