Connect with us

    DAKSHINA KANNADA

    ಹಿಂದೂ ಭಜಕರ ವಿರುದ್ಧ ಅವಹೇಳನಕಾರಿ ಪೋಸ್ಟ್- ಅರಣ್ಯಾಧಿಕಾರಿ ಅಮಾನತಿಗೆ ಹಿಂದೂ ಸಂಘಟನೆಗಳ ಆಗ್ರಹ

    ಪುತ್ತೂರು ಡಿಸೆಂಬರ್ 27: ಹಿಂದೂ ಭಜಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಬರೆದಿದ್ದ ಅರಣ್ಯ ಇಲಾಖೆಯ ಅಧಿಕಾರಿಯ ಅಮಾನತಿಗೆ ಹಿಂದೂ ಸಂಘಟನೆಗಳಿ ಪಟ್ಟು ಹಿಡಿದಿದ್ದು, ನಾಳೆಯ ವರೆಗೆ ಗಡುವು ನೀಡಿದ್ದಾರೆ.


    ಹಿಂದೂ ಭಜಕರ ವಿರುದ್ದ ಅರಣ್ಯ ಇಲಾಖೆಯ ಅಧಿಕಾರಿ ಸಂಜೀವ ಪೂಜಾರಿ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಭಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಈ ಹಿಂದೆ ಪ್ರವಾದಿ ಬಗ್ಗೆ ಪೋಸ್ಟ್ ಮಾಡಿದ ಹಿಂದೂ ಯುವಕನನ್ನು ಪೋಲೀಸರು ತಕ್ಷಣ ಬಂಧಿಸಿದ್ದಾರೆ. ಆದರೆ ಹಿಂದೂಗಳ ಆಚರಣೆಯ ಬಗ್ಗೆ ಬರೆದ ಅಧಿಕಾರಿಯ ಮೇಲೆ ಕ್ರಮಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ.

    ಅಲ್ಲದೆ ಹಿಂದೂ ಭಜಕರ ಅವಹೇಳನಕಾರಿಯಾಗಿ ಬರೆದ ಅಧಿಕಾರಿಯನ್ನು ಸಮರ್ಥಿಸುವ ಕೆಲಸ ಆಗುತ್ತಿದೆ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಯು.ಟಿ.ಖಾದರ್ ಅಧಿವೇಶನದಲ್ಲಿ ಅಧಿಕಾರಿಯ ಪರ ಮಾತನಾಡುತ್ತಾರೆ. ಹಿಂದೂಗಳ ಆಚರಣೆ ಬಗ್ಗೆ ಬರೆದವನ ಪರ ವಹಿಸುವ ಈ ಮುಖಂಡರು ಹಿಂದೂ ಯುವಕನ ಪರ ಯಾಕೆ ಮಾತಾಡಿಲ್ಲ ಎಂದು ಆರೋಪಿಸಿದ ಅವರು ಅರಣ್ಯ ಇಲಾಖೆಯ ಅಧಿಕಾರಿಯನ್ನು ಅಮಾನತು ಮಾಡದೇ ಹೋದಲ್ಲಿ ಪ್ರತಿಭಟನೆಯನ್ನು ಹಂತ ಹಂತವಾಗಿ ಮಾಡಲಾಗುವುದು ಎಂದರು.

    10 ಸಾವಿರ ಭಜಕರನ್ನು ಸೇರಿಸಿ ರಸ್ತೆ ತಡೆ ನಡೆಸಲಾಗುವುದು, ಅರಣ್ಯ ಇಲಾಖೆಯ ಎಲ್ಲಾ ಕಛೇರಿ ಮುಂದೆಯೂ ಪ್ರತಿಭಟಿಸಲಾಗುವುದು ಎಂದು ಸರಕಾರ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಾಳೆ ತನಕ ಅಧಿಕಾರಿ ಹಾಗು ಜನಪ್ರತಿನಿಧಿಗಳಿಗೆ ಗಡು ನೀಡಿದ ಹಿಂದೂ ಸಂಘಟನೆಗಳು, ತಪ್ಪಿದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಐದು ಪೋಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply