LATEST NEWS
ರಾಹುಲ್ ಗಾಂಧಿ ಮಿಂಚಿನ ಸಂಚಾರಕ್ಕೆ ಸಂಪೂರ್ಣ ಬ್ಲಾಕ್ ಆದ ರಾಷ್ಟ್ರೀಯ ಹೆದ್ದಾರಿ
ರಾಹುಲ್ ಗಾಂಧಿ ಮಿಂಚಿನ ಸಂಚಾರಕ್ಕೆ ಸಂಪೂರ್ಣ ಬ್ಲಾಕ್ ಆದ ರಾಷ್ಟ್ರೀಯ ಹೆದ್ದಾರಿ
ಮಂಗಳೂರು ಮಾರ್ಚ್ 20: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಜಿಲ್ಲೆಗಳ ಪ್ರವಾಸದ ವೇಳೆ ನಡೆಸುತ್ತಿರುವ ರೋಡ್ ಶೋ ಗೆ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಬ್ಲಾಕ್ ಆಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾದ ಘಟನೆ ನಡೆದಿದೆ.
ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಬಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಂತರ ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ತೆರಳಿ ಉಡುಪಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ನಂತರ ರಸ್ತೆ ಮಾರ್ಗವಾಗಿ ಮುಲ್ಕಿ ಹಾಗೂ ಸುರತ್ಕಲ್ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ರಸ್ತೆ ಮಾರ್ಗವಾಗಿ ಸಂಚರಿಸಿದ್ದರು. ಈ ನಡುವೆ ಭದ್ರತೆ ದೃಷ್ಠಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಡೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಕಾಂಗ್ರೇಸ್ ಕಾರ್ಯಕರ್ತರು ರಸ್ತೆಯಲ್ಲಿ ನಿಂತು ರಾಹುಲ್ ಗಾಂಧಿ ಅವರಿಗೆ ಜೈಕಾರ ಹಾಕುತ್ತಿದ್ದರು. ಅಲ್ಲದೆ ತಮ್ಮ ವಾಹನಗಳಲ್ಲಿ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿದರ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬ್ಲಾಕ್ ಆಗಿತ್ತು. ಉರಿಯುವ ಬಿಸಿಲಿನಲ್ಲಿ ಜನರು ರಸ್ತೆಯ ಮಧ್ಯೆ ನಿಂತು ಕಾಂಗ್ರೇಸ್ ಕಾರ್ಯಕರ್ತರಿಗೆ ಹಿಡಿ ಶಾಪ ಹಾಕುತ್ತಿದ್ದರು.
ಸುರತ್ಕಲ್ ನಲ್ಲಿ ನಡೆಯುವ ಜನಾಶೀರ್ವಾದ ಯಾತ್ರೆಗೆ ಸ್ಥಳೀಯ ಶಾಸಕ ಮೊಯಿದ್ದಿನ್ ಬಾವಾ ಸುರತ್ಕಲ್ ಜಂಕ್ಷನ್ ರಸ್ತೆ ಮಧ್ಯಭಾಗದಲ್ಲಿ ವೇದಿಕೆ ಹಾಕಿದ್ದರು. ಜನಾಶೀರ್ವಾದದ ಸಾರ್ವಜನಿಕ ಕಾರ್ಯಕ್ರಮವನ್ನು ರಸ್ತೆ ಮಧ್ಯೆಯೇ ನಡೆಸಲಾಯಿತು. ಕಾಂಗ್ರೇಸ್ ಕಾರ್ಯಕರ್ತರು ಸುರತ್ಕಲ್ ಪ್ಲೈ ಓವರ್ ಮೇಲೂ ಗಾಡಿ ನಿಲ್ಲಿಸಿದ್ದರಿಂದ ಅಲ್ಲೂ ಕೂಡ ರಸ್ತೆ ಬ್ಲಾಕ್ ಆಗಿ ಸಂಚಾರಕ್ಕೆ ತೊಂದರೆಯಾಗಿತ್ತು. ರಾಹುಲ್ ಗಾಂದಿ ಹೋದಲೆಲ್ಲಾ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದರು.