ಮುಲ್ಕಿ ಪೊದೆಗೆ ಬೆಂಕಿ ನೀಡಿ ನಂತರ ಆರಿಸಲು ಹರಸಾಹಸಪಟ್ಟ ಕಾಂಗ್ರೇಸ್ ಕಾರ್ಯಕರ್ತರು
ಮಂಗಳೂರು ಮಾರ್ಚ್ 20: ರಾಹುಲ್ ಗಾಂಧಿ ಮುಲ್ಕಿಗೆ ಆಗಮನದ ಹಿನ್ನೆಲೆ ರಸ್ತೆಯ ಬದಿಯಲ್ಲಿದ್ದ ಪೊದೆಗೆ ಬೆಂಕಿಯನ್ನು ಕಾಂಗ್ರೇಸ್ ಕಾರ್ಯಕರ್ತರು ನೀಡಿದ್ದರು, ಆದರೆ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಬೆಂಕಿ ಒಮ್ಮೆಲೆ ಸುತ್ತಮುತ್ತಲು ಹರಡಿಕೊಂಡು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.

ಕೂಡಲೆ ಸ್ಥಳದಲ್ಲಿ ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಮುಂದಾದರು, ಗಾಳಿ ಹಿನ್ನಲೆಯಲ್ಲಿ ಬೆಂಕಿ ನಂದಿಸಲು ಹರಸಾಹಸಪಡಬೇಕಾಯಿತು. ನಂತರ ಅಗ್ನಿ ಶಾಮಕದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದರು.
