KARNATAKA
ಫೆಬ್ರವರಿ 14 ರಿಂದ 10ನೇ ತರಗತಿಯವರೆಗೆ ಶಾಲೆ ಪುನರಾರಂಭ – ಸಿಎಂ

ಬೆಂಗಳೂರು: ಭಾರೀ ವಿವಾದ ಎಬ್ಬಿಸಿ ರಾಜ್ಯದಲ್ಲಿ ಗಲಾಟೆಗೆ ಕಾರಣವಾಗಿದ್ದ ಹಿಜಬ್ ಕೇಸರಿ ಪೈಟ್ ಗೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಇಂದು ಹೈಕೋರ್ಟ್ ಮಧ್ಯಂತರ ಮೌಖಿಕ ಆದೇಶ ಹೊರಬಿದ್ದ ಬೆನ್ನಲ್ಲೇ ಮೊದಲ ಹಂತದಲ್ಲಿ ಇದೇ ಸೋಮವಾರದಿಂದ 8 ರಿಂದ 10 ರವರೆಗಿನ ತರಗತಿಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.
ಹೈಕೋರ್ಟ್ ನ ಮೌಖಿಕ ಆದೇಶ ಬಂದ ಬೆನ್ನಲೆ ಸಭೆ ನಡೆಸಿದ ಸಿಎಂ ಬಸವರಾಜ್ ಬೊಮ್ಮಾಯಿ ಮೊದಲು 8 ರಿಂದ 10ನೆ ತರಗತಿ ನಡೆಸಲು ತೀರ್ಮಾನಿಸಿದ್ದು, ಬಳಿಕ ಎರಡನೇ ಹಂತದಲ್ಲಿ ಪಿಯುಸಿ ಮತ್ತು ಪದವಿ ಕಾಲೇಜುಗಳನ್ನು ಆರಂಭಿಸಲಾಗುವುದು. ಆದರೆ ಆ ಬಗ್ಗೆ ದಿನಾಂಕ ನಿರ್ಧರಿಸಿಲ್ಲ. ಸಮಯ ಬಂದಾಗ ಹೇಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
