ಉಡುಪಿ ಲಾಕ್ ಡೌನ್ ಸಂಕಷ್ಟದಲ್ಲಿದ್ದ ಜನರಿಗೆ ತಂಪನ್ನು ನೀಡಿದ ವರ್ಷಧಾರೆ

ಉಡುಪಿ ಎಪ್ರಿಲ್ 7: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ಜನರಿಗೆ ಇಂದು ಸಂಜೆ ನಂತರ ಸುರಿದ ವರ್ಷಧಾರೆ ಸ್ವಲ್ಪ ತಂಪನ್ನು ನೀಡಿದೆ.

ಉಡುಪಿ ಜಿಲ್ಲೆಯ ಕಾಪು, ಪಡುಬಿದ್ರಿ, ಶಿರ್ವದಲ್ಲಿ ಮಧ್ಯಾಹ್ನ ನಂತರ ಮಳೆ ಸುರಿಯಲು ಆರಂಭಿಸಿದ್ದರೆ, ಅಜೆಕಾರು, ಹೆಬ್ರಿ, ಮಾಳ ಮೊದಲಾದೆಡೆ ಬೆಳಿಗ್ಗೆನಿಂದಲೇ ಮಳೆ ಸುರಿಯಲಾರಂಭಿಸಿದೆ. ಉಡುಪಿ ನಗರದಲ್ಲೂ ಕೂಡ ಗುಡುಗು ಸಹಿ ಬಾರಿ ಗಾಳಿ ಮಳೆ ಸುರಿದಿದೆ.

ಒಂದೆಡೆ ಮಳೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರಗಿದರೆ , ಈ ಅಕಾಲಿಕ ಮಳೆ ಮಳೆಯಿಂದ ಗೇರು ಮಾವು ಹಲಸಿನ ಬೆಳೆಗಳಿಗೆ ಹಾನಿಯಾಗಿದೆ. ಕರಾವಳಿಯಲ್ಲಿ ಮಿಶ್ರಬೆಳೆಯಾಗಿ ಈ ಸಮಯದಲ್ಲಿ ಉದ್ದು ಹುರುಳಿ ಮತ್ತು ಹೆಸರು ಬೆಳೆಯುತ್ತಿದ್ದು, ಈ ಅಕಾಲಿಕ ಮಳೆಗೆ ಬೆಳೆ ನಾಶವಾಗುವ ಬೀತಿ ಎದುರಿಸುತ್ತಿದ್ದಾರೆ.