ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ

ಮಂಗಳೂರು ಎ. 7: ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಒಂದು ಕಡೆ ಕೊರೊನಾ ಇನ್ನೊಂದು ಕಡೆ ಬಾರಿ ಬಿಸಿಲಿನಿಂದಾಗಿ ಕಂಗೆಟ್ಟಿದ್ದ ಜನರಿಗೆ ಈ ಮಳೆ ಸ್ವಲ್ಪ ರಿಲಾಕ್ಸ್ ನೀಡಿದೆ.

ದಕ್ಷಿಣಕನ್ನಡ ಜಿಲ್ಲೆಯ ಕಡಬ,ನೆಲ್ಯಾಡಿ, ಅಲಂಕಾರು ಪ್ರದೇಶಗಳಲ್ಲಿ ಸಿಡಿಲು ಮಿಂಚು ಸಹಿತ ಭಾರೀ ಮಳೇ ಸುರಿದಿದೆ. ಅಲ್ಲದೆ ಸುಳ್ಯ, ಸುಬ್ರಹ್ಮಣ್ಯ, ಪಂಜ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇದೆ. ಮೊದಲೇ ಕೊರೋನಾ ಸಂಕಷ್ಟದಲ್ಲಿರುವಾಗ ಅಕಾಲಿಕವಾಗಿ ಸುರಿದ ಮಳೆಯು ಇಳೆಯನ್ನು ತಂಪಾಗಿಸಿದರೂ,ಕೃಷಿಕರನ್ನು ಕಂಗಾಲಾಗಿಸಿದೆ.