LATEST NEWS
ಕುಂದಾಪುರ ಸಮುದ್ರದ ತೀರದಲ್ಲಿ ಗಾಳಿಯಲ್ಲಿ ಹಾರಾಡಿದ ಮೀನು

ಕುಂದಾಪುರ ಸಮುದ್ರದ ತೀರದಲ್ಲಿ ಗಾಳಿಯಲ್ಲಿ ಹಾರಾಡಿದ ಮೀನು
ಕುಂದಾಪುರ ನವೆಂಬರ್ 15: ಕುಂದಾಪುರದಲ್ಲಿ ಸಮುದ್ರ ತೀರದಲ್ಲಿ ಮೀನುಗಳು ಗಾಳಿಯಲ್ಲಿ ಹಾರಾಡ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ. ರಾಶಿ ರಾಶಿ ಮೀನುಗಳು ಸಮುದ್ರ ದಡಕ್ಕೆ ಆಗಮಿಸಿ ಮೀನುಗಾರರಿಗೆ ಸುಗ್ಗಿಯ ವಾತಾವರಣವನ್ನು ಸೃಷ್ಠಿ ಮಾಡಿವೆ.
ಸಮುದ್ರದಿಂದ ಒಂದು ರೀತಿಯ ಬೆಳ್ಳಿಯ ಸಣ್ಣ ಬಾಣಗಳು ಚಿಮ್ಮು ರೀತಿ ಮೀನುಗಳು ನೀರಿನಿಂದ ಮೇಲಕ್ಕೆ ಹಾರಾಡಿ ಕೌತುಕವನ್ನು ಸೃಷ್ಠಿಸಿದೆ. ಹೀಗೆ ಗಾಳಿಯಲ್ಲಿ ಹಾರಾಡುತ್ತಿರುವ ಮೀನು ಅರಬ್ಬೀ ಸಮುದ್ರದಲ್ಲಿ ಸಿಗುವ ರುಚಿಕರ ಬೂತಾಯಿ ಮೀನುಗಳು.

ಉಡುಪಿ ಜಿಲ್ಲೆ ಕುಂದಾಪುರದ ಕೋಡಿ ಬೀಚಲ್ಲಿ ಈ ಘಟನೆ ನಡೆದಿದೆ. ಕೋಡಿಯ ಮೀನುಗಾರರು ಅರಬ್ಬೀ ಸಮುದ್ರದ ದಡದಲ್ಲಿ ಕೈರಂಪಣಿ ಎಂಬ ಬಲೆ ಹಾಕಿದ್ದರು. ಎಲ್ಲಾ ಮೀನುಗಾರರು ಸಾಲಾಗಿ ನಿಂತು ದಡದ ಕಡೆ ಬಲೆ ಎಳೆಯುವಾಗ ನಿರೀಕ್ಷೆ ಮೀರಿ ನೂರು ಪಟ್ಟು ಹೆಚ್ಚು ಮೀನು ಬಲೆಗೆ ಬಿದ್ದಿದೆ. ರಾಶಿ ರಾಶಿ ಮೀನು ದಡಕ್ಕೆ ಅಪ್ಪಳಿಸಿದೆ.
ಕುಂದಾಪುರ ಕೋಡಿಯ ಕರಾವಳಿ ಫ್ರೆಂಡ್ಸ್ ಬಲೆಗೆ ಮೂರು ಸಾವಿರ ಕೆಜಿಯಷ್ಟು ಬೂತಾಯಿ ಸಿಕ್ಕಿದೆ. ಮೀನಿನ ರಭಸಕ್ಕೆ- ಒದ್ದಾಡುವ ಫೋಸರ್ ಗೆ ಬಲೆಯೇ ಹರಿದು 10 ಸಾವಿರ ಕೆಜಿಯಷ್ಟು ಮೀನು ಮತ್ತೆ ಸಮುದ್ರ ಸೇರಿದೆ.
ಕೈರಂಪಣಿ ಬಲೆಯಲ್ಲಿ 16 ಮಂದಿ ಮೊದಲು ಬಲೆ ಬೀಸಿದ್ದು, ಮೀನಿನ ರಾಶಿಯನ್ನು ಕಂಡು ಸ್ಥಳೀಯ 50 ಗಟ್ಟುಮುಟ್ಟು ಯುವಕರನ್ನು ಕರೆಸಿ ಮೀನು ಹಿಡಿಯಲಾಗಿದೆ. ಸಮುದ್ರಕ್ಕೆ ಬಲೆ ಎಸೆದಂತೆ ಮೀನುಗಾರರಿಗೆ 50 ಭಾಕ್ಸ್ ಗಳಲ್ಲಿ ತುಂಬುವಷ್ಟು ಮೀನು ಸಿಕ್ಕಿದೆ. ಸ್ಥಳೀಯರಂತೂ ಬಲೆಯಿಂದ ಜಿಗಿದು ದಡ ಸೇರಿದ್ದ ಮೀನನ್ನು ಬೀಚ್ ಬದಿ ಮುಗಿಬಿದ್ದರು.